ಹೂವಿನ ಹಡಗಲಿ

ಗಣತಿ ಕಾರ್ಯಕ್ಕೆ ಮೊದಲು ದಿನವೇ ಕೈಕೊಟ್ಟ ಆ್ಯಪ್‌ ಸರ್ವರ್ ಸಮಸ್ಯೆ

ಗಣತಿ ಕಾರ್ಯಕ್ಕೆ ಮೊದಲು ದಿನವೇ ಕೈಕೊಟ್ಟ ಆ್ಯಪ್‌ ಸರ್ವರ್ ಸಮಸ್ಯೆ

ಹೂವಿನ ಹಡಗಲಿ 23:  ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸೋಮವಾರ ಆರಂಭವಾದ ಮೊದಲ ದಿನವೇ ಸಮೀಕ್ಷೆ ಗೆ ರೂಪಿಸಿದ್ದ ಆ್ಯಪ್ ನ ತಾಂತ್ರಿಕ ದೋಷ ಮತ್ತು ಸರ್ವರ್ ಸಮಸ್ಯೆ ಎದುರಾಯಿತು.  ಸಮೀಕ್ಷೆ 2025 ಗಣತಿ ಕಾರ್ಯ ತಹಸಿಲ್ದಾರ ಜಿ  ಸಂತೋಷ್ ಕುಮಾರ್ ಸಮೀಕ್ಷೆ ಕಾರ್ಯಕ್ಕೆ ಚಾಲನೆ ನೀಡಿದರು.

ಪಟ್ಟಣದ 23 ನೇ ಡಿವಿಜನ್ ಹಳ್ಳದ ರಸ್ತೆಯಲ್ಲಿ ಊಳಿಗದ ಹನುಮೇಶ ಇವರ ಕುಟುಂಬ ಗಣತಿ ಮಾಡುವುದರ ಮೂಲಕ ಚಾಲನೆಯನ್ನು ನೀಡಿದರು. ಸಮೀಕ್ಷೆಗೆ ನಿಖರವಾದ ಮಾಹಿತಿ ಕುಟುಂಬದವರು ನೀಡಿ ಸಹಕರಿಸಿರಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ  ಮಹೇಶ್ ಪೂಜಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಲ್ಯಾಧಿಕಾರಿ ರಮೇಶ್ ,ಸರ್ಕಾರಿ ನೌಕರ ಸಂಘದ ಅಧ್ಯಕ್ಷ  ಕೊಟ್ರಗೌಡ ಅಯ್ಯನಗೌಡ್ರ, ಗಣತಿದಾರ  ಗುರುಬಸವನಗೌಡ, ಶಿಕ್ಷಕ  ಪಕೀರ ಸಾಬ್ ಇದ್ದರು. ಹೂವಿನ ಹಡಗಲಿ ತಾಲೂಕಿನಲ್ಲಿ ಒಟ್ಟು 407 ಗಣತಿ ಬ್ಲಾಕ್ ಗಳಿದ್ದು, 407  ಗಣತಿದಾರರು ಮತ್ತು 35 ಮೇಲ್ವಿಚಾರಕರು  9 ಜನ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸುತ್ತಿದ್ದಾರೆ.ಸೆಪ್ಟೆಂಬರ್ 22.9. 25 ರಿಂದ  07.09.25 ರವರೆಗೆ ಗಣತಿ ಕಾರ್ಯ ನಡೆಯುತ್ತದೆ ಎಂದು ತಹಶೀಲ್ದಾರ್ ಜಿ ಸಂತೋಷ್ ಕುಮಾರ್ ತಿಳಿಸಿದರು. 


ಸುದ್ದಿ ಓದಿ