ಆಂಧ್ರ ಗಣಿಯಲ್ಲಿ ಸ್ಫೋಟ ದುರಂತ, ಕನಿಷ್ಠ 10 ಸಾವು
ಕಪಡಾ, ಮೇ 8: ಆಂಧ್ರಪ್ರದೇಶದ ಕಡಪಾದಲ್ಲಿನ ಸುಣ್ಣದ ಕಲ್ಲಿನ ಗಣಿಯಲ್ಲಿ ಶನಿವಾರ ಸಂಭವಿಸಿದ ಸ್ಫೋಟ ದುರಂತದಲ್ಲಿ ಕನಿಷ್ಠ 10 ಜನರು ಮೃತಪಟ್ಟಿದ್ದಾರೆ . ಈ ಘಟನೆಯಲ್ಲಿ ಹಲವು ಜನರು ಅವಶೇಷಗಳ ಅಡಿಯಲ್ಲಿ ಸಿಕ್ಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ
ಕಳಸಪಾಡು ಬ್ಲಾಕ್ ನ ಮಾಮಿಲ್ಲಾಪಲ್ಲೆ ಗ್ರಾಮದಲ್ಲಿ ಇಂದು ಬೆಳಿಗ್ಗೆ ಈ ಘಟನೆ ನಡೆದಿದೆ.
ಬಲಿಯಾದವರೆಲ್ಲರೂ ಗಣಿ ಕಾರ್ಮಿಕರು. ಇನ್ನೂ ಕೆಲವರು ಅವಶೇಷಗಳ ಅಡಿಯಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ನಂಬಲಾಗಿದ್ದು, ಹೆಚ್ಚಿನ ಮಾಹಿತಿ ಬರಬೇಕಿದೆ.