ಅಂಬೇಡ್ಕರ್ ಅವರ ಬದುಕು ಎಲ್ಲರಿಗೂ ಸ್ಫೂರ್ತಿ : ತಹಸಿಲ್ದಾರ ಇಂಗಳೆ
ಹುಕ್ಕೇರಿ 14: ನಗರದಲ್ಲಿ ತಾಲೂಕಾ ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಡಾ, ಬಾಬಾಸಾಹೇಬ ಅಂಬೇಡ್ಕರ್ ರವರ 132 ನೇ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಬಾಬಾಸಾಹೇಬರ ಭಾವ ಚಿತ್ರಕ್ಕೆ ತಹಸಿಲ್ದಾರ ಎಸ್ ಬಿ ಇಂಗಳೆ ಮತ್ತು ಸಮಾಜ ಮುಖಂಡರು ಪೂಜೆ ಸಲ್ಲಿಸುವ ಮೂಲಕ ಮೆರವಣೆಗೆಗೆ ಚಾಲನೆ ನೀಡಲಾಯಿತು. ಮಾದ್ಯಮಗಳೊಂದಿಗೆ ಮಾತನಾಡಿದ ತಹಸಿಲ್ದಾರರು ಪ್ರಗತಿಯ ಕನಸು ಕಂಡ ಮೇರು ನಾಯಕ ನಮ್ಮ ಹೆಮ್ಮೆಯ ಸಂವಿಧಾನ ಶಿಲ್ಪಿ ಡಾ, ಬಾಬಾಸಾಹೇಬ ಅಂಬೇಡ್ಕರ್ ರವರ ಆದರ್ಶ ಎಲ್ಲರ ಜೀವನಕ್ಕೆ ದಾರಿ. ಬಾಬಾ ಸಾಹೇಬರ ಚಿಂತೆನೆಗಳು ಇಂದಿಗೂ ಯುವಜನೆತೆಗೆ ಸ್ಫೂರ್ತಿ ನೀಡುತ್ತಲೇ ಇದೆ ಎಂದರು. ಸಮಾಜ ಮುಖಂಡ ಸುರೇಶ ತಳವಾರ ಮಾತನಾಡಿ ಚುನಾವಣೆ ನೀತಿ ಸಂಹಿತೆ ದೃಷ್ಟಿಯಿಂದ ತಾಲೂಕಾ ಆಡಳಿತ ಸರಳ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದರು.ವಾದ್ಯ ಮೇಳಗಳೊಂದಿಗೆ ಮೆರವಣೆಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಾಲೂಕಾ ಪಂಚಾಯತ ಆವರಣದಲ್ಲಿ ಮುಕ್ತಾಯಗೊಂಡಿತು.ನಂತರ ಹೆಬ್ಬಾಳದ ಬಸವಚೇತನ ದೇವರ ದಿವ್ಯ ಸಾನಿಧ್ಯದಲ್ಲಿ ನಡೆದ ಸಮಾರಂಭದಲ್ಲಿ ಸಮಾಜ ಕಲ್ಯಾಣ ಸಹಾಯಕ ನಿರ್ದೆಶಕ ಎಚ್ ಎ ಮಾಹುತ ಅಧಿಕಾರಿಗಳನ್ನು ಮತ್ತು ದಲಿತ ಮುಖಂಡರನ್ನು ಸ್ವಾಗತಿಸಿ ಪ್ರಾಸ್ತಾವಿಕ ವಾಗಿ ಮಾತನಾಡಿ ತಾಲೂಕಾ ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ಇಂದು ಬಾಬಾಸಾಹೇಬ ಅಂಬೇಡ್ಕರ್ ರವರ ಜನ್ಮ ದಿನವನ್ನು ಸರ್ಕಾರದ ನಿಯಮಾನುಸಾರ ಅರ್ಥಪೂರ್ಣವಾಗಿ ಉಪನ್ಯಾಸ ನೀಡುವ ಮೂಲಕ ಆಚರಿಸಲಾಗುತ್ತಿದೆ ಎಂದರು.
ವೇದಿಕೆ ಮೇಲೆ ತಾಲೂಕಾ ಕಂದಾಯ ಇಲಾಖೆ ಉಪತಹಸಿಲ್ದಾರ ಎನ್ ಆರ್ ಪಾಟೀಲ, ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ವಿಲಾಸರಾಜ, ಸಂಕೇಶ್ವರ ಪುರಸಭೆ ಮುಖ್ಯಾಧಿಕಾರಿ ಉಮೇಶ್ ಗುಡ್ಡದ, ಎ ಡಿ ಎಲ್ ಆರ್ ಶಶಿಕಾಂತ ಹೆಗಡೆ, ಬಿ ಇ ಓ ಮೊಹನ ದಂಡಿನ, ಸವಿತಾ ಹಲಕಿ ಉಪಸ್ಥಿತರಿದ್ದರು.
ಖ್ಯಾತ ವಿಚಾರವಾದಿ ಕಲಬುರ್ಗಿಯ ವಿಠ್ಠಲ ವಗ್ಗನ ಇವರಿಂದ ಅಂಬೇಡ್ಕರ್ ಕುರಿತು ಉಪನ್ಯಾಸ ಜರುಗಿತು.ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಉದಯ ಹುಕ್ಕೇರಿ, ಸುನಿಲ್ ಭೈರನ್ನವರ, ಕೆಂಪಣ್ಣಾ ಶಿರಹಟ್ಟಿ, ಬಾಹುಸಾಹೇಬ ಪಾಂಡ್ರೆ, ರಮೇಶ ಹುಂಜಿ, ಎಲ್ ಬಿ ಮಾಲದಾರ, ಎಸ್ ಎಮ್ ನಡಮನಿ, ಎಮ್ ಬಿ ಕಾಂಬಳೆ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.