ಅಲಿಘರ್ ನಲ್ಲಿ ವಿಮಾನ ಅಪಘಾತ: 6 ಜನ ಪಾರು
ಅಲಿಘರ್, ಆಗಸ್ಟ್ 27 ಧನಿಪುರ ಬಳಿ ಮಂಗಳವಾರ ವಿಮಾನ ಅಪಘಾತ ಸಂಭವಿಸಿ ಇಬ್ಬರು ಪೈಲಟ್ಗಳು ಸೇರಿದಂತೆ ಆರು ಮಂದಿ ಪವಾಡ ಸದೃಶ ರೀತಿಯಲ್ಲಿ ಪ್ರಣಾಪಾಯದಿಂದ ಪಾರಾಗಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ವಿಟಿ-ಎವಿವಿ ವಿಮಾನ ವಾಯುನೆಲೆಯಲ್ಲಿ ಇಳಿಯುವಾಗ ವಿದ್ಯುತ್ ತಂತಿಗೆ ಡಿಕ್ಕಿ ಬಡಿದಿದೆ ಎಂದು ವರದಿಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿಸಿದರೂ ಬೆಂಕಿ ಇಡೀ ವಿಮಾನಕ್ಕೆ ವ್ಯಾಪಿಸಿ ಆಹುತಿಯಾಯಿತು. ನವದೆಹಲಿಯಿಂದ ಬರುತ್ತಿದ್ದ ವಿಮಾನ ವಾಯುನೆಲೆಯಲ್ಲಿ ಇಳಿಯುವಾಗ ವಿದ್ಯುತ್ ತಂತಿಗೆ ಬಡಿದು ಈ ಅವಗಢ ಸಂಭವಿಸಿದೆ. ಕಿಶೋರ್ ಮತ್ತು ದೀಪಕ್ ಎಂಬ ಇಬ್ಬರು ಪೈಲಟ್ಗಳು ಎಂಜಿನಿಯರ್ಗಳಾದ ರಾಂಪ್ರಕಾಶ್ ಗುಪ್ತಾ, ಪ್ರಭಾತ್ ತ್ರಿವೇದಿ, ಆನಂದ್ ಕುಮಾರ್ ಮತ್ತು ಕಾರ್ತಿಕ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಂಪನಿಯ ವಿಮಾನಗಳನ್ನು ರಿಪೇರಿ ಮಾಡಲು ಎಂಜಿನಿಯರ್ಗಳನ್ನು ಕರೆದುಕೊಂಡು ಹೋಗುತ್ತಿತ್ತು ಎನ್ನಲಾಗಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 