ಅಂತರರಾಷ್ಟ್ರೀಯ

ಭಾರತೀಯರ ಸ್ಥಳಾಂತರಕ್ಕೆ ವಾಯು ಪಡೆ ಸಿ-17 ಗ್ಲೋಬ್‌ ಮಾಸ್ಟರ್‌ ಸಜ್ಜು

ಭಾರತೀಯರ   ಸ್ಥಳಾಂತರಕ್ಕೆ   ವಾಯು ಪಡೆ  ಸಿ-17 ಗ್ಲೋಬ್‌ ಮಾಸ್ಟರ್‌  ಸಜ್ಜು

ನವದೆಹಲಿ / ಕಾಬೂಲ್ / ವಾಷಿಂಗ್ಟನ್,  ಆಗಸ್ಟ್‌  16 - ಅಫ್ಘಾನಿಸ್ತಾನದ  ರಾಜಧಾನಿ ಕಾಬೂಲ್  ನಗರಿಯನ್ನು       ತಾಲಿಬಾನಿಗಳು  ವಶಪಡಿಸಿಕೊಂಡ ನಂತರ   ಭಾರತ ಜಾಗೃತಗೊಂಡಿದೆ.    ಪ್ರಸ್ತುತ ಕಾಬೂಲ್‌ನಲ್ಲಿ ನೂರಾರು ಭಾರತೀಯರಿದ್ದು, ಅವರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲು  ಯೋಜನೆ ರೂಪಿಸಲಾಗಿದೆ ಎಂದು ಸರ್ಕಾರಿ  ಮೂಲಗಳು ತಿಳಿಸಿವೆ.   ಕಾಬೂಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿಗಳ ಜೊತೆಗೆ   ಭಾರತೀಯರ ಜೀವಕ್ಕೆ ಯಾವುದೇ ಅಪಾಯವಾಗದಂತೆ   ಸೂಕ್ತ  ಕ್ರಮಗಳನ್ನು ಕೈಕೊಳ್ಳಲಾಗಿದೆ  ಎಂದು  ಸ್ಪಷ್ಟಪಡಿಸಿದ್ದಾರೆ.   ಒಂದೊಮ್ಮೆ  ಅವರನ್ನು    ತುರ್ತಾಗಿ   ಸ್ವದೇಶಕ್ಕೆ  ವಾಪಸ್ಸು  ಕರಸಿಕೊಳ್ಳುವ ಪರಿಸ್ಥಿತಿ   ಎದುರಾದರೆ,   ಸೂಕ್ತ ಯೋಜನೆ ರೂಪಿಸಿದ್ದೇವೆ    ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯ   ಪರಿಸ್ಥಿತಿಗಳನ್ನು  ಅವಲಂಭಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು.  ಅಫ್ಘಾನಿಸ್ತಾನದಲ್ಲಿ  ಬೆಳವಣಿಗೆಗಳನ್ನುಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ    ಅವರು ಹೇಳಿದ್ದಾರೆ.    ಭಾರತೀಯರನ್ನು   ಸ್ವದೇಶಕ್ಕೆ     ಕರೆಸಿಕೊಳ್ಳಲು    ವಾಯುಪಡೆಯ ಸಿ -17 ಗ್ಲೋಬ್‌ಮಾಸ್ಟರ್ ಮಿಲಿಟರಿ ಟ್ರಾನ್ಸ್‌ಪೋರ್ಟ್ ಏರ್‌ಕ್ರಾಫ್ಟ್ ಅನ್ನು ಸರ್ಕಾರ ಸಿದ್ಧವಾಗಿರಿಸಿದೆ ಎಂದು ತಿಳಿದುಬಂದಿದೆ.  ಅಲ್ಲದೆ,    ಕಾಬೂಲ್‌  ಅಂತರಾಷ್ಟ್ರೀಯ   ವಿಮಾನ ನಿಲ್ದಾಣದಿಂದ   129 ಭಾರತೀಯರನ್ನು  ಹೊತ್ತ   ಏರ್ ಇಂಡಿಯಾ ವಿಮಾನ (AI-244) ಭಾನುವಾರ ಸಂಜೆ 5.30 ಕ್ಕೆ ಕಾಬೂಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಹೊರಟು  ರಾತ್ರಿ 7.40 ಕ್ಕೆ ದೆಹಲಿಗೆ  ತಲುಪಿದೆ.

ಕಾಬೂಲ್‌ನ ಎಲ್ಲ ಗಡಿಗಳನ್ನು ಮುಚ್ಚಲಾಗಿದೆ.   ಕಾಬೂಲ್ ಬಳಿಯ ಜಲಾಲಾಬಾದ್  ನಗರವನ್ನೂ    ತಾಲಿಬಾನ್ಆಕ್ರಮಿಸಿಕೊಂಡಿದೆ.   ಹಾಗಾಗಿ ಇಡೀ ನಗರ ದಿಗ್ಭಂಧನದಲ್ಲಿ ಸಿಲುಕಿಕೊಂಡಂತಾಗಿದೆ.   ಇದರಿಂದ  ಕಾಬೂಲ್‌ನಿಂದ ಹೊರಬರಲು ಅಥವಾ   ಒಳಹೋಗಲು   ವಿಮಾನ  ಮಾರ್ಗ  ಏಕೈಕ ಮಾರ್ಗವಾಗಿದೆ.  ಸ್ವದೇಶಗಳಿಗೆ ಹಿಂತಿರುಗುವವರ   ಸಂಖ್ಯೆ  ಹೆಚ್ಚಿರುವ   ಕಾರಣ  ಕಾಬೂಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ  ಪ್ರಯಾಣಿಕರಿಂದ  ಕಿಕ್ಕಿರಿದಿದೆ.   ಬಹಳಷ್ಟು ಮಂದಿ  ತಮ್ಮ ಕುಟುಂಬ ಸದಸ್ಯರು,  ಸರಕು  ಸರಂಜಾಮುಗಳೊಂದಿಗೆ ಆತಂಕದಿಂದ  ಕಳೆಯುತ್ತಿದ್ದಾರೆ.   ಹೊರ ಜಗತ್ತಿನೊಂದಿಗೆ   ಅಫ್ಘಾನಿಸ್ತಾನವನ್ನು  ಸಂಪರ್ಕಿಸಲು ಕಾಬೂಲ್ ವಿಮಾನ ನಿಲ್ದಾಣದ  ಕಾರ್ಯಾಚರಣೆಗೆ  ಸಹಕರಿಸುವುದಾಗಿ ನ್ಯಾಟೋ ಘೋಷಿಸಿದೆ.

ಸುದ್ದಿ ಓದಿ