ಅಂತರರಾಷ್ಟ್ರೀಯ

ಮಾಲ್ಡೀವ್ಸ್ ನಲ್ಲಿ ಮತ್ತೆ ಲಾಕ್‍ಡೌನ್‍ ಜಾರಿ

ಮಾಲ್ಡೀವ್ಸ್ ನಲ್ಲಿ ಮತ್ತೆ ಲಾಕ್‍ಡೌನ್‍ ಜಾರಿ

ಮಾಲೆ, ಆಗುಸ್ಟ್ 30: ಕರೋನವೈರಸ್ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಏರಿಕೆಯಾಗುತ್ತಿರುವುದರ ನಡುವೆ, ಸೋಂಕು ನಿಯಂತ್ರಿಸಲು ಮಾಲ್ಡೀವ್ಸ್ ಸರ್ಕಾರ ಮತ್ತೊಮ್ಮೆ ಲಾಕ್‌ಡೌನ್ ಜಾರಿಗೊಳಿಸಲು ಸಜ್ಜಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ಭಾನುವಾರ ತಿಳಿಸಿವೆ.


ಲಾಕ್‌ಡೌನ್ ನಿಂದ ನಾಗರಿಕರು ಮತ್ತು ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮಗಳು ಬೀರಬಹುದು ಎಂದು ಅಧ್ಯಕ್ಷ ಇಬ್ರಾಹಿಂ ಸೋಲಿ ಹೇಳಿದ್ದಾರೆ. ಈಗಿರುವ ಕೊವಿಡ್-19 ಸೋಂಕುಗಳ ತೀವ್ರತೆ ಮುಂದುವರಿದರೆ ಸರ್ಕಾರ ಬಿಗಿ ಲಾಕ್‍ಡೌನ್‍ ಜಾರಿಗೊಳಿಸಲಿದೆ. ಆರೋಗ್ಯ ತುರ್ತು ಕಾರ್ಯಾಚರಣೆ ಕೇಂದ್ರವೂ ಈ ಕುರಿತು ಎಚ್ಚರಿಕೆಗಳನ್ನು ನೀಡಿದೆ ಎಂದು ಅವರು ಹೇಳಿದ್ದಾರೆ.


ಜುಲೈನಲ್ಲಿ ನಿರ್ಬಂಧಗಳನ್ನು ಸಡಿಲಿಸಿದಾಗಿನಿಂದ ಮಾಲ್ಡೀವ್ಸ್ ನಲ್ಲಿ ಸದ್ಯ, ಕೊವಿಡ್‍-19 ಸೋಂಕಿನ ತೀವ್ರತೆ ಎರಡನೇ ಹಂತಕ್ಕೆ ಕಾಲಿಟ್ಟಿದೆ. ಆಗಸ್ಟ್‍ ತಿಂಗಳಲ್ಲಿ ಪ್ರತಿದಿನವೂ ಸೋಂಕು ಪ್ರಮಾಣದಲ್ಲಿ ಏರಿಕೆ ಕಂಡು ಬರುತ್ತಿದೆ. ಈ ಪ್ರಕರಣಗಳ ಪೈಕಿ ಹೆಚ್ಚಿನವು ಸ್ಥಳೀಯವೇ ಆಗಿವೆ.

ಶನಿವಾರ ದೃಢಪಟ್ಟ ಒಟ್ಟು 109 ಹೊಸ ಕೊವಿಡ್-19 ಪ್ರಕರಣಗಳ ಪೈಕಿ 80 ಪ್ರಕರಣಗಳು ಸ್ಥಳೀಯವಾಗಿದ್ದರೆ 29 ಮಂದಿ ವಿದೇಶಿ ಪ್ರಜೆಗಳಾಗಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಸದ್ಯ, ಒಟ್ಟು ಕೊವಿಡ್‍ ಪ್ರಕರಣಗಳ ಸಂಖ್ಯೆ 7,578 ಕ್ಕೆ ತಲುಪಿದೆ. ಈ ಮಧ್ಯೆ, 4,925 ಜನರು ವೈರಸ್‍ ನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಈವರೆಗೆ 28 ​​ಮಂದಿ ಸಾವನ್ನಪ್ಪಿದ್ದಾರೆ.  

ಸುದ್ದಿ ಓದಿ