ಅಂತರರಾಷ್ಟ್ರೀಯ

ಅಫ್ಘಾನಿಸ್ತಾನದಲ್ಲಿ ಆ ಆರು ಮಂದಿಯೇ ನಿರ್ಣಯಕ.....!

ಅಫ್ಘಾನಿಸ್ತಾನದಲ್ಲಿ   ಆ   ಆರು   ಮಂದಿಯೇ    ನಿರ್ಣಯಕ.....!

ಕಾಬೂಲ್, ಆಗಸ್ಟ್‌  16:  ಅಫ್ಘಾನಿಸ್ತಾನದಲ್ಲಿ   ತಾಲಿಬಾನ್    ಭಯೋತ್ಪಾದಕ ಸಂಘಟನೆಯ     ಸಂಸ್ಥಾಪಕ    ಮುಲ್ಲಾ ಮೊಹಮ್ಮದ್ ಒಮರ್ ,   ಅಮೆರಿಕದಲ್ಲಿ ಸೆಪ್ಟೆಂಬರ್ 11 ರ ದಾಳಿ ನಂತರ  ತಲೆಮರೆಸಿಕೊಂಡು,   2013 ರಲ್ಲಿ ಸಾವನ್ನಪ್ಪಿದ್ದ    ಎಂಬ  ವಿಷಯವನ್ನು    ಎರಡು ವರ್ಷಗಳ ನಂತರ  ಆತನ  ಮಗ   ಜಗತ್ತಿಗೆ  ತಿಳಿಸಿದ್ದ  . ಒಮರ್ ಸಾವಿನ  ನಂತರ  ಆರು ಮಂದಿ  ತಾಲಿಬಾನ್‌ನಲ್ಲಿ  ಪ್ರಮುಖ ನಾಯಕರಾಗಿ ಹೊರಹೊಮ್ಮಿದ್ದಾರೆ.  ಪ್ರಸ್ತುತ, ಆರು ಮಂದಿ ತಾಲಿಬಾನ್ ಗೆ  ಮಾರ್ಗದರ್ಶನ  ನೀಡಿ  ಮುನ್ನಡೆಸುತ್ತಿದ್ದಾರೆ.

ಯಾರವರು ..

ಹೈಬತುಲ್ಲಾ ಅಖುಂಜದಾ;

ಸುಮಾರು   60  ವರ್ಷದ   ಹೈಬತುಲ್ಲಾ ಅಖುಂಜದಾ,    ಇಸ್ಲಾಂ ಧರ್ಮದ  ಬಗ್ಗೆ  ಕಠೋರ   ನಿಷ್ಟೆಹೊಂದಿರುವ   ನಾಯಕ.  ತಾಲಿಬಾನ್  ರಾಜಕೀಯ, ಧಾರ್ಮಿಕ ಹಾಗೂ  ಸೇನಾ ವ್ಯವಹಾರಗಳ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದಾನೆ.  ಇಸ್ಲಾಮಿಕ್ ನ್ಯಾಯಶಾಸ್ತ್ರಜ್ಞ ನಾಗಿರುವ  ಹೈಬತುಲ್ಲಾ ತಾಲಿಬಾನ್‌ನ ಸರ್ವೋಚ್ಚ ನಾಯಕ ಎಂದು ಪರಿಗಣಿಸಲಾಗಿದೆ.   2016 ರಲ್ಲಿ ಅಫ್ಘಾನ್-ಪಾಕಿಸ್ತಾನದ ಗಡಿಯಲ್ಲಿ  ಅಮೆರಿಕಾದ   ಡ್ರೋನ್ ದಾಳಿಯಲ್ಲಿ ಹತರಾದ ಅಖ್ತರ್ ಮನ್ಸೂರ್ ಅವರಿಂದ ಅಧಿಕಾರ ವಹಿಸಿಕೊಂಡಿದ್ದ,   ಇದಕ್ಕೂ  ಮೊದಲು, ಪಾಕಿಸ್ತಾನದ ಕುಚ್‌ಲಾಕ್‌ನ   ಮಸೀದಿಯಲ್ಲಿ ಧರ್ಮಗುರುಗಳಾಗಿ ಕೆಲಸ ಮಾಡಿದ್ದ  ಪ್ರಸ್ತುತ   ಆತ ಎಲ್ಲಿದ್ದಾನೆ  ಎಂಬುದು ತಾಲಿಬಾನ್ ಹೊರತುಪಡಿಸಿ ಯಾರಿಗೂ ತಿಳಿದಿಲ್ಲ.

 ಮುಲ್ಲಾ ಮೊಹಮ್ಮದ್ ಯಾಕೂಬ್;

ತಾಲಿಬಾನ್ ಸಂಸ್ಥಾಪಕರಾದ ಮುಲ್ಲಾ ಮೊಹಮ್ಮದ್ ಒಮರ್   ಮಗ   ಈ  ಯಾಕೂಬ್‌ . ತಾಲಿಬಾನ್ ಸೇನಾ ಕಾರ್ಯಾಚರಣೆಗಳನ್ನು ನೋಡಿಕೊಳ್ಳುತ್ತಿದ್ದಾನೆ.  ಆತ ಪ್ರಸ್ತುತ ಅಫ್ಘಾನಿಸ್ತಾನದಲ್ಲಿದ್ದಾನೆ.  2016 ರಲ್ಲಿ ತಾಲಿಬಾನ್‌ನ  ಪರಮೋಚ್ಛ  ನಾಯಕನಾಗಬೇಕಿದ್ದ  ಯಾಕೂಬ್‌,   ತಾನೂ  ಇನ್ನೂಚಿಕ್ಕವನಾಗಿದ್ದು, ಸಾಕಷ್ಟು ಅನುಭವವಿಲ್ಲದ ಕಾರಣದಿಂದ ಹಿಂದೆ ಸರಿದಿದ್ದ   ಈಗ  ಆತನಿಗೆ  ಸುಮಾರು 30 ವರ್ಷ ವಯಸ್ಸು ಎಂಬುದು  ಮಾಹಿತಿ.

ಸಿರಾಜುದ್ದೀನ್ ಹಕ್ಕಾನಿ:

ಮುಜಾಹಿದ್ದೀನ್ ಕಮಾಂಡರ್ ಜಲಾಲುದ್ದೀನ್ ಹಕ್ಕಾನಿಯ ಮಗ  ಸಿರಾಜುದ್ದೀನ್ ಹಕ್ಕಾನಿ.  ಅಫ್ಘಾನಿಸ್ತಾನದ  ಹಕ್ಕಾನಿ ನೆಟ್‌ ವರ್ಕ್‌   ನಾಯಕನಾಗಿ  ಕಾರ್ಯನಿರ್ವಹಿಸುತ್ತಿದ್ದಾನೆ.  ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿ ಪ್ರದೇಶವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡಿದ್ದಾನೆ.  ತಾಲಿಬಾನ್‌ನ  ಆರ್ಥಿಕ, ಮಿಲಿಟರಿ ವ್ಯವಹಾರಗಳು, ನಿಧಿಸಂಗ್ರಹಣೆ  ಹಾಗೂ  ಹಂಚಿಕೆ  ಮತ್ತಿತರ   ವ್ಯವಹಾರ  ನೋಡಿಕೊಳ್ಳುತ್ತಿದಾನೆ. ಹಕ್ಕಾನಿಗಳು ಆತ್ಮಾಹುತಿ ದಾಳಿ ನಡೆಸುವಲ್ಲಿ ನಿಷ್ಣಾತರು. ಸಿರಾಜುದ್ದೀನ್ ವಯಸ್ಸು 40 ರಿಂದ 50 ವರ್ಷ. ಪ್ರಸ್ತುತ   ಆತ ಎಲ್ಲಿದ್ದಾನೆ ಎಂಬುದು ತಿಳಿದಿಲ್ಲ.  ಮುಲ್ಲಾ ಅಬ್ದುಲ್ ಘನಿ ಬರದಾರ್, ಶೇರ್ ಮೊಹಮ್ಮದ್ ಅಬ್ಬಾಸ್,  ಅಬ್ದುಲ್ ಹಕೀಮ್ ಹಕ್ಕಾನಿ  ಕೂಡಾ  ತಾಲಿಬಾನ್ ಗುಂಪಿನ ಪ್ರಮುಖ ನಾಯಕರು ಎಂದು ಗುರುತಿಸಲಾಗಿದೆ.

ಸುದ್ದಿ ಓದಿ