ಅಫ್ಘನ್; ಮಾನವೀಯ ಕಾರ್ಯ ಮುಂದುವರಿಸಲು ವಿಶ್ವಸಂಸ್ಥೆಗೆ ತಾಲಿಬಾನ್ ಸೂಚನೆ
ವಾಷಿಂಗ್ಟನ್, ಆಗಸ್ಟ್ 20: ಅಫ್ಘಾನಿಸ್ತಾನದಲ್ಲಿಯೇ ಉಳಿದುಕೊಂಡು, ಮಾನವೀಯ ನೆರವಿನ ಕಾರ್ಯಗಳನ್ನು ಮುಂದುವರಿಸುವಂತೆ ತಾಲಿಬಾನ್ ವಿಶ್ವಸಂಸ್ಥೆಗೆ ಸೂಚಿಸಿದೆ ಎಂದು ಅಫ್ಘಾನಿಸ್ತಾನದಲ್ಲಿರುವ ವಿಶ್ವಸಂಸ್ಥೆಯ ಮಾನವೀಯ ನೆರವಿನ ಸಮನ್ವಧಿಕಾರಿ ರಮೀಝ್ ಅಲಕ್ಬರೋವ್ ಗುರುವಾರ "ಸ್ಪುಟ್ನಿಕ್ " ಗೆ ತಿಳಿಸಿದ್ದಾರೆ.
ತಾಲಿಬಾನ್ ನಮಗೆ ಬೆಂಬಲದ ಭರವಸೆ ನೀಡಿದೆ ಎಂದು ಅಲಕ್ಬರೋವ್ ಹೇಳಿದ್ದಾರೆ " ಅವರು ಮತ್ತೊಮ್ಮೆ ನಮಗೆ ಬೆಂಬಲ ವ್ಯಕ್ತಪಡಿಸಿದ್ದು, ಇಲ್ಲಿಯೇ ಉಳಿದುಕೊಂಡು, ಮಾನವೀಯ ನೆರವಿನ ಕಾರ್ಯಗಳನ್ನು ಮುಂದುವರಿಸಲು ಕೋರಿದ್ದಾರೆ ಎಂದು ಹೇಳಿದ್ದಾರೆ.