ಅಂತರರಾಷ್ಟ್ರೀಯ

ಅಫ್ಘನ್‌ ಬಿಕ್ಕಟ್ಟು; ಮಾರುಕಟ್ಟೆಗಳಲ್ಲಿ ಗಗನಕ್ಕೇರಿದ ಡ್ರೈ ಫ್ರೂಟ್ಸ್‌ ಬೆಲೆಗಳು

ಅಫ್ಘನ್‌   ಬಿಕ್ಕಟ್ಟು;  ಮಾರುಕಟ್ಟೆಗಳಲ್ಲಿ  ಗಗನಕ್ಕೇರಿದ   ಡ್ರೈ ಫ್ರೂಟ್ಸ್‌   ಬೆಲೆಗಳು

ನವದೆಹಲಿ,  ಆಗಸ್ಟ್‌  23: ಕೊರೊನಾ    ಹಿನ್ನೆಲೆಯಲ್ಲಿ  ಪ್ರತಿಯೊಬ್ಬರಲ್ಲೂ ಆರೋಗ್ಯದ    ಕಾಳಜಿ ಹೆಚ್ಚಾಗಿದೆ.   ಬಹಳಷ್ಟು ಮಂದಿ  ಪೌಷ್ಟಿಕ ಆಹಾರವಾಗಿ  ಒಣಗಿದ  ಹಣ್ಣುಗಳನ್ನು  ಸೇವಿಸಲು  ಆಸಕ್ತಿ ವಹಿಸುತ್ತಿದ್ದಾರೆ.   ಅದರಿಂದ   ಮಾರುಕಟ್ಟೆಯಲ್ಲಿ   ಈ ಪದಾರ್ಥಗಳಿಗೆ   ಇನ್ನಿಲ್ಲದ    ಬೇಡಕೆ  ಸೃಷ್ಟಿಯಾಗಿದೆ. ಒಣಗಿದ ಹಣ್ಣುಗಳಲ್ಲಿ, ಬಾದಾಮಿ, ಅಂಜೂರದ ಹಣ್ಣು, ಪಿಸ್ತಾ, ಅಲೂಬುಕರ, ಕುರ್ಬಾನಿ..  ಇತ್ಯಾದಿಗಳನ್ನು   ಅಫ್ಘಾನಿಸ್ತಾನದಿಂದ    ಆಮದು ಮಾಡಿಕೊಳ್ಳಲಾಗುತ್ತದೆ.   ಅಲ್ಲಿನ   ಪ್ರಸ್ತುತ  ಪರಿಸ್ಥಿತಿಗಳಿಂದಾಗಿ,    ಅವುಗಳ  ಸಾಗಣೆ   ಸ್ಥಗಿತಗೊಂಡಿವೆ,  ಬೆಲೆಗಳು ಏರಿಕೆಯಾಗುತ್ತಿವೆ ಎಂದು   ಮಾರುಕಟ್ಟೆ  ಮೂಲಗಳು ಹೇಳಿವೆ.

ರೂ .50 ರಿಂದ ರೂ .200ವರೆಗೆ ...

ಅಫ್ಘಾನಿಸ್ತಾನವನ್ನು   ತಾಲಿಬಾನ್  ಅತಿಕ್ರಮಿಸಿದ  ನಂತರ     ಅಲ್ಲಿಂದ  ಆಮದು ಮಾಡಿಕೊಳ್ಳುವ  ಒಣಗಿದ ಹಣ್ಣುಗಳ ಬೆಲೆಗಳ  ಮೇಲೆ ಪರಿಣಾಮ ಬೀರಿದೆ  ನಾವು ಅಲ್ಲಿಂದ ಹೆಚ್ಚಿನ ಪ್ರಮಾಣದಲ್ಲಿ ಒಣಗಿದ ಹಣ್ಣುಗಳನ್ನು ಆಮದು ಮಾಡಿಕೊಳ್ಳುತ್ತೇವೆ. ಮೊದಲು ದೆಹಲಿ, ಮುಂಬೈ  ಮತ್ತಿತರ  ಪ್ರದೇಶಗಳಿಗೆ  ಪೂರೈಕೆಯಾಗುತ್ತದೆ.  ಅಲ್ಲಿಂದ  ಹೈದರಾಬಾದ್  ಹಾಗೂ  ಮಹಾರಾಷ್ಟ್ರದ ನಾಂದೇಡ್ ಗೆ ರವಾನೆಯಾಗುತ್ತದೆ.  ಅಲ್ಲಿಂದ ಜಿಲ್ಲೆಗಳ  ವ್ಯಾಪಾರಿಗಳು ಖರೀದಿಸುತ್ತಾರೆ ಎಂದು  ಮೂಲಗಳು ತಿಳಿಸಿವೆ.

ಅಫ್ಘಾನಿಸ್ತಾನದ ಪ್ರಸ್ತುತ ಪರಿಸ್ಥಿತಿಯಿಂದಾಗಿ ಸಾರಿಗೆ  ಸ್ಥಗಿತಗೊಳಿಸಲಾಗಿದೆ.   ಪರಿಣಾಮ ಇಲ್ಲಿ    ಬೆಲೆಗಳ ಮೇಲೆ ಪ್ರಭಾವ ಬೀರುತ್ತಿದೆ.  ಪ್ರಸ್ತುತ  ಒಣ ಹಣ್ಣುಗಳ  ಬೆಲೆಗಳು   ಪ್ರತಿ ಕೆಜಿಗೆ ಹದಿನೈದು ದಿನಗಳ ಹಿಂದಿನ    ಬೆಲೆಗಿಂತ  50 ರಿಂದ 200 ರೂ.  ಹೆಚ್ಚಳಗೊಂಡಿವೆ  ಎಂದು  ಮೂಲಗಳು ಹೇಳಿವೆ.

ಸುದ್ದಿ ಓದಿ