ಅಂತರರಾಷ್ಟ್ರೀಯ

ಅಫ್ಘನ್‌ ಅಧ್ಯಕ್ಷ ಅಶ್ರಫ್‌ ಘನಿ ಉಜ್ಬೇಕಿಸ್ತಾನ ತಾಷ್ಕೆಂಟ್ ಗೆ ಪಲಾಯನ ...?

ಅಫ್ಘನ್‌   ಅಧ್ಯಕ್ಷ  ಅಶ್ರಫ್‌  ಘನಿ  ಉಜ್ಬೇಕಿಸ್ತಾನ   ತಾಷ್ಕೆಂಟ್ ಗೆ ಪಲಾಯನ ...?

ಕಾಬೂಲ್‌,  ಆಗಸ್ಟ್‌  16: ರಾಜಧಾನಿ   ಕಾಬೂಲ್‌  ನಗರದಲ್ಲಿ   ರಕ್ತಪಾತ  ನಡೆಯುವುದನ್ನು   ತಡೆಯಲು   ತಾವು    ಕಾಬೂಲ್‌   ತೊರೆಯುತ್ತಿರುವುದಾಗಿ     ರಾಜೀನಾಮೆ   ನೀಡಿರುವ    ಅಫ್ಘಾನಿಸ್ತಾನದ   ಅಧ್ಯಕ್ಷ  ಅಶ್ರಫ್‌ ಘನಿ   ಘೋಷಿಸಿದ್ದಾರೆ 

ಅಧ್ಯಕ್ಷ   ಅಶ್ರಫ್ ಘನಿ   ಅಫ್ಘಾನಿಸ್ತಾನದಿಂದ  ಪರಾರಿಯಾಗಿದ್ದಾರೆ.   ಆರಂಭದಲ್ಲಿ  ಅವರು  ತಜಕಿಸ್ತಾನಕ್ಕೆ   ತೆರಳಿದ್ದಾರೆ  ಎಂದು ವರದಿಯಾಗಿತ್ತು.   ಪ್ರಸ್ತುತ  ಲಭ್ಯವಾಗಿರುವ  ಮಾಹಿತಿ ಪ್ರಕಾರ   ಘನಿ,  ಅವರ ಪತ್ನಿ,  ಸೇನಾ  ಮುಖ್ಯಸ್ಥ,  ರಾಷ್ಟ್ರೀಯ  ಭದ್ರತಾ ಸಲಹೆಗಾರರು   ಉಜ್ಬೇಕಿಸ್ತಾನದ ತಾಷ್ಕೆಂಟ್ ಗೆ ಪಲಾಯನ ಮಾಡಿದ್ದಾರೆ  ಅಲ್ ಜಜೀರಾ ಸುದ್ದಿಸಂಸ್ಥೆ ಹೇಳಿದೆ. 

ಅಧ್ಯಕ್ಷರ   ಖಾಸಗಿ  ಅಂಗರಕ್ಷಕರೊಬ್ಬರು  ಈ  ವಿಷಯ  ತಿಳಿಸಿದ್ದಾರೆಂದು  ಹೇಳಿದೆ.  ಆದರೆ, ಇದನ್ನು ಅಲ್ಲಿನ ಸರ್ಕಾರ ಇನ್ನೂ ದೃಢಪಡಿಸಿಲ್ಲ.

ರಕ್ತಪಾತ  ತಡೆಯಲು ರಾಜಧಾನಿ ಕಾಬೂಲ್‌  ತೊರೆಯುತ್ತಿದ್ದೇನೆ   ಎಂದು ಅಫ್ಘಾನಿಸ್ತಾನದ   ಜನರನ್ನು  ಉದ್ದೇಶಿಸಿ      ಅಶ್ರಫ್‌  ಘನಿ   ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 

ವಿದೇಶಿಯರು, ಅಫ್ಘನ್ ಅಧಿಕಾರಿಗಳು  ಇತರ  ದೇಶಗಳ    ನಾಗರೀಕರು   ದೇಶ   ತೊರೆಯಲು ಕಾಬೂಲ್ ವಿಮಾನ ನಿಲ್ದಾಣದಲ್ಲಿ    ಜಮಾಯಿಸಿರುವ  ಕಾರಣ    ಕಾಬೂಲ್ ವಿಮಾನ ನಿಲ್ದಾಣದಲ್ಲಿ  ಗೊಂದಲದ ಪರಿಸ್ಥಿತಿ  ಸೃಷ್ಟಿಯಾಗಿದೆ.

ಎಲ್ಲಾ ರೀತಿಯ ವಾಣಿಜ್ಯ ವಿಮಾನಗಳನ್ನು ರದ್ದುಗೊಳಿಸಲಾಗಿದೆ.

ಯುಕೆ, ಜರ್ಮನಿ, ಕೆನಡಾ ಹಾಗೂ   ಅಮೆರಿಕಾ  ದೇಶಗಳು ತಮ್ಮ ನಾಗರಿಕರು,  ಸೇನಾ  ಸಿಬ್ಬಂದಿಯೊಂದಿಗೆ   ಮಿಲಿಟರಿ ವಿಮಾನಗಳ   ಮೂಲಕ ದೇಶ ತೊರೆಯುತ್ತಿದ್ದಾರೆ.

ಸುದ್ದಿ ಓದಿ