ದಾನೇಶ್ವರಿ ಸಂಗೀತ ಪಾಠಶಾಲೆಯ ಮಕ್ಕಳ ಸಾಧನೆ
Achievements of children from Daneshwari Music School
ಲೋಕದರ್ಶನ ವರದಿ
ಹುಬ್ಬಳ್ಳಿ 08 : ದಾನೇಶ್ವರಿ ಸಂಗೀತ ಪಾಠಶಾಲೆಯ ಮಕ್ಕಳು ನವಿ ಮುಂಬೈನ ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮಂಡಳಿ ನಡೆಸಿದ ಪರೀಕ್ಷೆಗಳಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆ ಯಾಗಿದ್ದಾರೆ. 1) ಮಧ್ಯಮ ಪ್ರಥಮ ವಿಭಾಗದಲ್ಲಿ ಅವನಿ ರೂಢಗಿ, 2)ಪ್ರವೇಶಿಕಾ ಪ್ರಥಮ ವಿಭಾಗದಲ್ಲಿ ಶ್ರೇಯಾ ಲಂಗೋಟಿ, ಆರ್ಯನ್ ಐತಾಳ್, ಅಚ್ಚುತ್‌ಜಿ.ಸಿ., ಈಶಾನ ಜಿ.ಸಿ., ಚಾರ್ವಿ ಹಿರೇಮಠ, ಅನುಷಾ ಸರ್ವಂದ, ತನುಶ್ರೀ ಮಳಿಮಠ, 3)ಪ್ರಾರಂಬಿಕಾ ವಿಭಾಗದಲ್ಲಿ ಕಾರ್ಣಿಕ್ ಹುಬ್ಬಳ್ಳಿ, ಮಾನ್ಯಾ ಶಿರಗಾವಿ, ಸಾನ್ವಿ ರಾಠೋಡ, ತನುಶ್ರೀ ಹೂಗಾರ, ಪ್ರಾರ್ಥನಾ ಹವಾಲ್ದಾರ, ರಿಷಿಕಾ ಮಹಾಂತನಮಠ, ಅವರು ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದು ತೇರ್ಗಡೆಯಾಗಿದ್ದಾರೆ. ದಾನೇಶ್ವರಿ ಸಂಗೀತ ಪಾಠಶಾಲೆಯ ಸಂಗೀತ ಶಿಕ್ಷಕಿ, ಕನ್ನಡ ಪ್ರಾಧ್ಯಾಪಕಿ ಪ್ರೊ ಶೋಭಾ ಜಾಬಿನ ಅವರು ಮಕ್ಕಳಿಗೆ ತರಬೇತಿ ನೀಡಿದ್ದಾರೆ.
ದಾನೇಶ್ವರಿ ಸಂಗೀತ ಪಾಠಶಾಲೆಯಲ್ಲಿ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿ ಹಾಗೂ ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಆಯೋಜಿಸಿದ್ದ ತ್ರೀವಿಧ ದಾಸೋಹಿ ತುಮಕೂರ ಸಿದ್ಧಗಂಗಾಮಠದ ಪರಮ ಪೂಜ್ಯ ಡಾ. ಶಿವಕುಮಾರ ಸ್ವಾಮಿಜಿಯವರ 119ನೇ ಜಯಂತಿ ಕಾರ್ಯಕ್ರಮದಲ್ಲಿ ಮಕ್ಕಳು ಪರೀಕ್ಷೆಗಳಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆ ಯಾಗಿದ್ದಕ್ಕೆ ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಮಕ್ಕಳಿಗೆ ಹಾಗೂ ಶಿಕ್ಷಕಿ ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿ ಹಾಗೂ ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಿದರು. ಶುಭ ಕೋರಿದರು.
ರಾಣಿ ಚನ್ನಮ್ಮ ಪರಿಸರ ಸೇವಾ ಸಮಿತಿಯ ಅಧ್ಯಕ್ಷ, ನಿವೃತ್ ಪ್ರಾಚಾರ್ಯ ಪ್ರೊ ಎಸ್.ಎಂ.ಸಾತ್ಮಾರ, ಸೋಹನ ಸುರೇಶ ಹೊರಕೇರಿ, ಸುಜಯ ಸುರೇಶ ಹೊರಕೇರಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ನಿವೃತ್ ಗ್ರಂಥಪಾಲಕ ಬಿ.ಎಸ್.ಮಾಳವಾಡ, ಸಿದ್ದಮ್ಮ , ಅನುಸೂಯಾ, ಶ್ವೇತಾ , ಗಂಗಾ , ಶಾಂತಾ , ಶಾಲಿನಿ, ರಾಜೇಶ್ವರಿ, ಸ್ನೇಹಾ, ಕವಿತಾ, ಡಾ ಮಿನಲ್, ಗೌರಿ ಶ್ರೇಯಾ ಹರ್ಷಿಕಾ ವೇದಾ ಶ್ರೇಷ್ಟಾ ಗೌತಮ್ ಶಿವಾನಿ ಡ್ರುವಂತ್ ಸಮೃಧ್, ಮಂದಾರ , ಇಂಜಿನಿಯರ್ ಮಲ್ಲಿಕಾರ್ಜುನ ಜಾಬಿನ, ಸುಭಾಸ್,ಸೇರಿದಂತೆ ಮುಂತಾದವರು ಭಾಗವಹಿಸಿದ್ದರು. ಸಂಸ್ಥೆಯ ಮಾಹಿತಿ,:ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮಂಡಳ ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ನೃತ್ಯವನ್ನು ಉತ್ತೇಜಿಸುವ ಪ್ರಮುಖ ಸಂಸ್ಥೆಯಾಗಿದೆ.
ಇದರ ಮುಖ್ಯ ಕಚೇರಿ/ಸಂಗೀತ ವಿದ್ಯಾಲಯವು ನವಿ ಮುಂಬೈನ ವಾಶಿಯಲ್ಲಿದೆ. ಭಾರತ ದೇಶದಲ್ಲಿ ಸಾವಿರಕ್ಕೂ ಹೆಚ್ಚು ಅಂಗಸಂಸ್ಥೆಗಳು ಮತ್ತು ನೂರಾರು ಪರೀಕ್ಷಾ ಕೇಂದ್ರಗಳನ್ನು ಹೊಂದಿದ್ದು, ಶಾಸ್ತ್ರೀಯ ಕಲೆಗಳ ಶಿಕ್ಷಣ ಮತ್ತು ಪರೀಕ್ಷೆಗಳನ್ನು ನಡೆಸುತ್ತದೆ. ಶಿಕ್ಷಣ: ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ (ಗಾಯನ), ನೃತ್ಯ (ಭರತನಾಟ್ಯ/ಕಥಕ್), ಮತ್ತು ವಾದ್ಯ ಸಂಗೀತ. ಪರೀಕ್ಷೆಗಳು: ಪ್ರಾರಂಬಿಕಾ, ಪ್ರವೇಶಿಕಾ, ಮಧ್ಯಮ, ವಿಶಾರದ, ಅಲಂಕಾರ ಮುಂತಾದ ಹಂತಗಳಲ್ಲಿ ಪರೀಕ್ಷೆಗಳನ್ನು ನಡೆಸುತ್ತದೆ. ಧ್ಯೇಯ: ಭಾರತೀಯ ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಸಂರಕ್ಷಿಸುವುದು ಮತ್ತು ಉತ್ತೇಜಿಸುವುದು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 