ಹಿಮಾ ಪ್ರವಾಹ, ಉತ್ತರ ಖಂಡ್ ಗೆ ಸಹಾಯದ ಹಸ್ತ ಚಾಚಿದ ಬ್ರಿಟನ್
ಲಂಡನ್, ಫೆ 8 :ಹಿಮ ಪ್ರವಾಹಕ್ಕೆ ಸಿಕ್ಕಿ ನಲುಗಿರುವ ಉತ್ತರ ಖಂಡ್ ರಾಜ್ಯಕ್ಕೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಭಾರತಕ್ಕೆ ಸಹಾಯ ಹಸ್ತ ಚಾಚಿ ಭಾರತಕ್ಕೆ ಯಾವುದೇ ಸಹಾಯ ಮಾಡಲು ಸಿದ್ಧವಿರುವುದಾಗಿ ಹೇಳಿದ್ದಾರೆ.ಇಂತಹ ಸಂದರ್ಭದಲ್ಲಿ ಯುಕೆ ಭಾರತದೊಂದಿಗೆ ನಿಂತಿದೆ, ಯಾವುದೇ ಸಂದರ್ಭದಲ್ಲಿ ನಾವು ಅಗತ್ಯ ಸಹಾಯ, ಬೆಂಬಲ ನೀಡಲು ಸಿದ್ಧವಿರುವುದಾಗಿ ಹೇಳಿದ್ದಾರೆ. ಅಲಕಾನಂದ ನದಿಯಲ್ಲಿ ಭಾರಿ ಪ್ರವಾಹ ಉಂಟಾಗಿದೆ ಹಾಗೆಯೇ ಮನೆಗಳು ಹತ್ತಿರದ ಋಷಿಗಂಗಾ ವಿದ್ಯುತ್ ಯೋಜನೆಗೆ ಭಾದಕವಾಗಿದೆ. ಚಮೋಲಿ ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಹಿಮಪರ್ವತ ಕುಸಿದು ಡ್ಯಾಂ ಒಡೆದ ಪರಿಣಾಮ ಉಂಟಾದ ಅನಾಹುತದಲ್ಲಿ 10 ಮಂದಿ ಬಲಿಯಾಗಿದ್ದು ಇದೇ ವೇಳೆ ಸುರಂಗದಲ್ಲಿ ಸಿಲುಕಿದ್ದ 16 ಮಂದಿಯನ್ನು ಐಟಿಬಿಪಿ ರಕ್ಷಿಣೆ ಮಾಡಿದೆ. ಹಿಮ ಪ್ರವಾಹದಲ್ಲಿ 150 ಜನರು ಕಾಣೆಯಾಗಿದ್ದು ಪ್ರಸ್ತುತ 10 ಮೃತದೇಹಗಳು ಪತ್ತೆಯಾಗಿರುವುದಾಗಿ ರಕ್ಷಣಾ ತಂಡಗಳು ಹೇಳಿವೆ. ಧೌಲಿ ಗಂಗಾ ನದಿಯಲ್ಲಿ ಭಾರೀ ಪ್ರವಾಹದ ಕಾರಣ ನೀರಿನ ಮಟ್ಟದ ನಿರಂತರ ಮೇಲ್ವಿಚಾರಣೆ ನಡೆಸುವಂತೆ ಉತ್ತರ ಪ್ರದೇಶದ ಸರ್ಕಾರ ಗಂಗಾ ತೀರದಲ್ಲಿರುವ ಅಧಿಕಾರಿಗಳನ್ನು ಎಚ್ಚರಿಸಿದ್ದು, ಜೊತೆಗೆ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.