ಕೋವಿಡ್ : ಒಂದೇ ದಿನ 29,472 ಪ್ರಕರಣ ದಾಖಲು
ಬ್ಯೂನಸ್ ಐರಿಸ್, ಏಪ್ರಿಲ್ 17:ಅರ್ಜೆಂಟೀನಾ ಕಳೆದ 24 ಗಂಟೆಗಳಲ್ಲಿ 29,472 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ, ಇದು ಕೋವಿಡ್ ಅಲೆ ಆರಂಭದ ಬಳಿಕಕ ದೈನಂದಿನ ಹೆಚ್ಚಳವಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಸಚಿವಾಲಯ ತಿಳಿಸಿದೆ. ಇದೇ ಅವಧಿಯಲ್ಲಿ ಸಾವಿನ ಸಂಖ್ಯೆ 160 ರಿಂದ 59,084 ಕ್ಕೆ ಏರಿದೆ. ಸೋಂಕು ಧನಾತ್ಮಕವಾದವರ ಸಂಖ್ಯೆ 2,658,628 ತಲುಪಿದೆ ಎಂದು ಸಚಿವಾಲಯ ತಿಳಿಸಿದೆ. ಕಳೆದ ವರ್ಷ 2020 ಮಾರ್ಚ್ 11, 2020 ರಂದು ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್-19 ಏಕಾಏಕಿ ಸಾಂಕ್ರಾಮಿಕ ರೋಗ ಎಂದು ಘೋಷಿಸಿತು. ಇಲ್ಲಿಯವರೆಗೆ, ವಿಶ್ವದಾದ್ಯಂತ 139.5 ದಶಲಕ್ಷಕ್ಕೂ ಹೆಚ್ಚು ಜನರು ಕೊರೋನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ, 2.99 ದಶಲಕ್ಷಕ್ಕೂ ಹೆಚ್ಚು ಸಾವುನೋವುಗಳಿವೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.