ಅರ್ಜೆಂಟೀನಾದಲ್ಲಿ ಕೊರೋನ ಸೋಂಕಿಗೆ 50 ಸಾವಿರ ಜನ ಬಲಿ
ಬ್ಯೂನಸ್ ಐಸ್, ಫೆಬ್ರವರಿ 13 : ಅರ್ಜೆಂಟೀನಾದಲ್ಲಿ ಕರೋನ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 50,029 ಕ್ಕೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ ಸೋಂಕಿಗೆ ಹೊಸದಾಗಿ 155 ಜನರು ಮೃಪಟ್ಟಿದ್ದಾರೆ . ಮತ್ತು ಇದೆ ಅವಧಿಯಲ್ಲಿ ಹೊಸದಾಗಿ 7,151 ಹೊಸ ಸೋಂಕು ಪ್ರಕರಣಗಳು ವರದಿಯಾಗಿದೆ ಈವರೆಗೆ ದೇಶದಲ್ಲಿ ದೃಡಪಡಿಸಿದ ಪ್ರಕಣಗಳ ಸಂಖ್ಯೆ 2,015,496 ತಲುಪಿದೆ ಏಕಾಏಕಿ ಮಾರಕ ಸೊಂಕು ಪ್ರಾರಂಭವಾದಾಗಿನಿಂದ ಈವರೆಗೆ 1.81 ದಶಲಕ್ಷಕ್ಕೂ ಹೆಚ್ಚು ಜನರು ಚೇತರಿಸಿಕೊಂಡಿದ್ದಾರೆ ಎಂದೂ ವರದಿಯಾಗಿದೆ.