ಗುಬ್ಬು ನಾರುತ್ತಿರುವ ಎಪಿಎಂಸಿ ತರಕಾರಿ ಮಾರ್ಕೆಟ್: ಸ್ಥಳಾಂತರಿಸಲು ಮನವಿ
APMC vegetable market stinks: Request to relocate
ಬಳ್ಳಾರಿ 17: ನಗರದ ಎಪಿಎಂಸಿಯಲ್ಲಿರುವ ತರಕಾರಿ ಮಾರ್ಕೆಟ್ ಮಳೆ ಬಂದ ಸಮಯದಲ್ಲಿ ರಸ್ತೆಯ ತುಂಬೆಲ್ಲ ನೀರು ನಿಂತು ಅದರಲ್ಲಿ ಕೊಳೆತ ತರಕಾರಿಗಳು ಮಿಕ್ಸ್ ಆಗಿ ಗುಬ್ಬು ನಾರುತ್ತದೆ ಕಾಯಿ ಪಲ್ಯ ತಿಂದಲ್ಲಿ ಹಾಗೂ ಹಣ್ಣುಗಳು ಸೇವಿಸಿದಲ್ಲಿ ಅನಾರೋಗ್ಯಕ್ಕೆ ತುತ್ತಾಗುವ ಅಪಾಯವಿದೆ.
ಕಾರಣ ಈ ಮಾರುಕಟ್ಟೆಯಲ್ಲಿ ಸ್ವಚ್ಛತೆಯನ್ನಾದರೂ ಕಾಪಾಡಿ ಅಥವಾ ಇದನ್ನು ಬೇರೆ ಕಡೆಯಾದರೂ ಸ್ಥಳಾಂತರ ಮಾಡಿ ಎಂದು ಎಪಿಎಂಸಿ ವರ್ತಕರ ಸಂಘದ ಮೆಣಸಿನ ಈಶ್ವರ್ಪ ಮತ್ತು ಇತರರು ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಯ ಸಚಿವ ಶಿವನಂದ್ ಪಾಟೀಲ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿ, ಈ ಮಾರ್ಕೆಟ್ ಹಾಗೂ ಹಣ್ಣು ಮಾರ್ಕೆಟ್ ಹೋಲ್ಸೇಲ್ ಹಾಗೂ ರಿಟಲ್ ಹಾಗೂ ದನಗಳ ಸಂತೆ ಬೇರೆ ಕಡೆ ಸ್ಥಳಾಂತರ ಮಾಡಿ ಇದರಿಂದ ರೈತರ ಕೃಷಿ ಉತ್ಪನ್ನ ಮಾರುಕಟ್ಟೆಗೆ ತಂದು ಮಾರಾಟ ಮಾಡಲು ತೊಂದರೆ ಆಗುತ್ತದೆ, ಕಾರಣ ದಯಮಾಡಿ ತಾವುಗಳು ಕಾಯಿ ಪಲ್ಯ ಮಾರ್ಕೆಟ್ ಹಣ್ಣು ಮಾರ್ಕೆಟ್ ದನಗಳ ಸಂತೆ ದಯಮಾಡಿ ಬೇರೆ ಕಡೆ ಅನಂತರ ಮಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಪಾಲನ್ನ, ಜೆ ಸಿ ಎಸ್ ಅರವಿಂದ, ಕಣ್ಣಿ ಶಿವಮೂರ್ತಿ, ಪ್ರಹಲ್ಲಾದ್, ಬಾಡದ ವೀರೇಶ್, ಎಚ್ ವಸಂತ್ ಕುಮಾರ್, ಎ ವಿಜಯ್ ಕುಮಾರ್, ನರಸಿಂಹಲು, ಮನೋಜ್ ಕುಮಾರ್, ವಿನೋದ್ ಕುಮಾರ್ ಸೇರಿದಂತೆ ಇತರರಿದ್ದರು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 