ರಾಜ್ಯಮಟ್ಟದ ಪ್ರೊ. ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿಗೆ ಡಾ. ಸುಜಾತಾ ಚಲವಾದಿ ಅವರು ಆಯ್ಕೆ
Dr. Sujatha Chalavadi selected for the state-level Prof. Mallepuram Literary Award
ಕಲಬುರಗಿ 02 : ಪ್ರೊ. ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನ(ರಿ.) ಕಲಬುರಗಿ ಮತ್ತು ದಲಿತ ಸಾಹಿತ್ಯ ಪರಿಷತ್ತು(ರಿ) ಜಿಲ್ಲಾ ವಿಜಯಪುರ ಸಹಯೋಗದಲ್ಲಿ ‘ಪ್ರೊ. ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ ಪ್ರದಾನ' ಮತ್ತು ‘ವಿಶೇಷೋಪನ್ಯಾಸ' ಕಾರ್ಯಕ್ರಮವನ್ನು ಜೂನ್ 5ರಂದು ವಿಜಯಪುರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಬಹುಶೃತ ವಿದ್ವಾಂಸರು. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾಗಿ, ಶಾಸ್ತ್ರಚೂಡಾಮಣಿ ಎಂದು ಖ್ಯಾತರಾದವರು. ಕನ್ನಡ-ಪಾಲಿ-ಪ್ರಾಕೃತ-ಸಂಸ್ಕೃತದಲ್ಲಿ ಆಳವಾದ ಜ್ಞಾನ ಪಡೆದು ನಾಡಿನ ಸಾಕ್ಷಿ ಪ್ರಜ್ಞೆಯಂತಿರುವ ಅವರಿಗೆ ಈಗ 75ರ ಹುಟ್ಟುಹಬ್ಬ, ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಚನ್ನಪ್ಪ ಕಟ್ಟಿಯವರು, ಹಿರಿಯ ಸಾಹಿತಿಗಳಾದ ಡಾ. ಕೃಷ್ಣಗೊಲ್ದಾರ ಕುಲಕರ್ಣಿ, ಡಾ. ಮಹಾಂತೇಶ ಬಿರಾದಾರ, ಸ್ವಾನ್ ಕೃಷ್ಣಮೂರ್ತಿ ಎಂ. ಧಾರವಾಡದ ಡಾ. ನಿಂಗಪ್ಪ ಮುದೇನೂರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಜೊತೆಗೆ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಉಪಸ್ಥಿತರಿರುವರು.ಪ್ರೊ. ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನದಿಂದ 2013 ರಿಂದ ‘ಪ್ರೊ. ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ'ಯನ್ನು ನೀಡುತ್ತ ಬರಲಾಗುತ್ತಿದೆ. ಇಲ್ಲಿಯವರೆಗೆ ಪ್ರೊ. ಎ.ವಿ. ನಾವಡ, ಮಂಗಳೂರು (2013), ಡಾ. ಮೂಡ್ನಾಕೂಡು ಚಿನ್ನಸ್ವಾಮಿ, ಬೆಂಗಳೂರು(2014), ಪ್ರೊ. ವಿ.ಜಿ. ಪೂಜಾರ, ಕಲಬುರಗಿ(2015), ಪ್ರೊ. ನೀಲಗಿರಿ ತಳವಾರ, ಮೈಸೂರು(2016), ಡಾ. ಹನುಮಾಕ್ಷಿ ಗೋಗಿ, ಹುಬ್ಬಳ್ಳಿ(2017), ಡಾ. ಅರ್ಜುನ ಗೊಳಸಂಗಿ, ಗದಗ(2018), ಡಾ. ಬಿ.ವಿ. ವಸಂತಕುಮಾರ, ಮೈಸೂರು(2020), ಡಾ. ಎಚ್.ಜಿ. ಶ್ರೀಧರ, ಪುತ್ತೂರು(2021), ಡಾ. ಕೆ. ಶಾರದಾ, ಕುಪ್ಪಂ, ಆಂಧ್ರ್ರದೇಶ(2022), ಡಾ. ಎಸ್. ಎಚ್. ಗೋವರ್ಧನ, ಬೆಂಗಳೂರು(2023), ಡಾ. ತಮಿಳ್ ಸೆಲ್ವಿ, ಚೆನೈ(2024) ಅವರಿಗೆ ಪ್ರಶಸ್ತಿ ನೀಡಲಾಗಿದೆ.
2025 ನೇ ಸಾಲಿನ ರಾಜ್ಯಮಟ್ಟದ ‘ಪ್ರೊ. ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ' ಗೆ ತಾಳಿಕೋಟಿಯ ಎಸ್.ಕೆ. ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಸುಜಾತಾ ಚಲವಾದಿ ಅವರು ಭಾಜನರಾಗಿದ್ದಾರೆ. ಜೂನ್ 5ರಂದು ವಿಜಯಪುರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತರಾದ ಡಾ.ಸುಜಾತಾ ಚಲವಾದಿಯವರಿಗೆ 10,000/- ನಗದು, ಫಲಪುಷ್ಪ ನೀಡಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಪ್ರೊ. ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ನಾಗರಾಜ ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 