ಅಂತರರಾಷ್ಟ್ರೀಯ

ಅಮೆರಿಕಾದಲ್ಲಿ ಮತ್ತೆ ತಲ್ಲಣ ಸೃಷ್ಟಿಸಿದ ಕೊರೊನಾ ಸೋಂಕು ....!

ಅಮೆರಿಕಾದಲ್ಲಿ ಮತ್ತೆ ತಲ್ಲಣ ಸೃಷ್ಟಿಸಿದ ಕೊರೊನಾ  ಸೋಂಕು ....!

ವಾಷಿಂಗ್ಟನ್, ಫೆಬ್ರವರಿ 25 : ಅಮೆರಿಕಾದಲ್ಲಿ ಕೊಂಚ ನಿಯಂತ್ರಣಕ್ಕೆ ಬಂದಿದ್ದ ಕೊರೊನಾ ಸೋಂಕಿನ ಹಾವಳಿ ಮತ್ತಷ್ಟು ಹೆಚ್ಚಾಗುತ್ತಿರುವುದು ಆತಂಕ್ಕೆ ಕಾರಣವಾಗಿದೆ. ನಿನ್ನೆ ಒಂದೇ ದಿನ 72 ಸಾವಿರ  ಜನರಿಗೆ  ಹೊಸದಾಗಿ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.ಅಮೆರಿಕಾದಲ್ಲಿ ಮಹಾಮಾರಿಯಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಗಣನೀಯ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲೇ ಮಹಾಮಾರಿ ಕೊರೊನಾವೈರಸ್ ಸೋಂಕಿಗೆ 2376 ಜನ ಜೀವ ಕಳೆದುಕೊಂಡಿದ್ದಾರೆ. ಈವರೆಗೆ ಮೃತಪಟ್ಟವರ ಸಂಖ್ಯೆ 5ಲಕ್ಷ ದಾಟಿದೆ.ಬುಧವಾರದ ಅಂಕಿ-ಅಂಶಗಳ ಪ್ರಕಾರ, ದೇಶದಲ್ಲಿ ಈವರೆಗೂ 2,89,72,045 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 1,93,40,318 ಸೋಂಕಿತರು ಗುಣಮುಖರಾಗಿದ್ದು, 91,14,319 ಸಕ್ರಿಯ ಪ್ರಕರಣಗಳಿವೆ ಎಂದೂ ವರದಿಯಾಗಿದೆ . 


ಸುದ್ದಿ ಓದಿ