ಅಂತರರಾಷ್ಟ್ರೀಯ

ಅಮೆರಿಕ ಚುನಾವಣಾ ಹಿಂಸಾಚಾರ - ಪ್ರಧಾನಿ ಮೋದಿ ಕಳವಳ

ಅಮೆರಿಕ ಚುನಾವಣಾ ಹಿಂಸಾಚಾರ -  ಪ್ರಧಾನಿ ಮೋದಿ ಕಳವಳ

ನವದೆಹಲಿ, ಜನವರಿ 7: ಅಮೆರಿಕದಲ್ಲಿ ನಡೆಯುತ್ತಿರುವ ಚುನಾವಣಾ ಪ್ರತಿಭಟನೆ ಮತ್ತು ಹಿಂಸಾಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ. ಕಾನೂನು ಬಾಹಿರ ಚಟುವಟಿಕೆಗಳ ಮೂಲಕ ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ಹಾಳು ಮಾಡಬಾರದು ಎಂದು ಅವರು ಹೇಳಿದ್ದಾರೆ.ಗಲಭೆ ಮತ್ತು ಹಿಂಸಾಚಾರದ ಸುದ್ದಿ ತಿಳಿದು ತೀವ್ರ ನೋವಾಗಿದೆ. ಅಧಿಕಾರದ ವ್ಯವಸ್ಥಿತ ಹಾಗೂ ಶಾಂತಿಯುತ ಹಸ್ತಾಂತರ ನಡೆಯಬೇಕು. ಕಾನೂನುಬಾಹಿರ ಪ್ರತಿಭಟನೆಗಳ ಮೂಲಕ ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ಹಾಳುಗೆಡವಲು ಸಾಧ್ಯವಿಲ್ಲ  ಎಂದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೂರಾರು ಬೆಂಬಲಿಗರು ಯುಎಸ್ ಕ್ಯಾಪಿಟಲ್ ಕಟ್ಟಡದ ಒಳಗೆ ನುಗ್ಗಿ ದಾಂಧಲೆ  ನಡೆಸಿದ್ದಾರೆ. ಟ್ರಂಪ್ ಅವರ ಚುನಾವಣಾ ಸೋಲಿನ ಫಲಿತಾಂಶವನ್ನು ರದ್ದುಗೊಳಿಸಬೇಕು. ಟ್ರಂಪ್ ಅವರೇ ಚುನಾವಣೆಯಲ್ಲಿ ಗೆದ್ದಿದ್ದಾರೆ ಎಂದು ಘೋಷಣೆ ಕೂಗಿದ್ದಾರೆ. ಪ್ರತಿಭಟನೆಯಲ್ಲಿ ನಿತರವಾಗಿದ್ದ   ಟ್ರಂಪ್ ಬೆಂಬಲಿಗರನ್ನು ತೆರವುಗೊಳಿಸಲು ಪೊಲೀಸರು ಸುಮಾರು ಮೂರು ಗಂಟೆ ಹೆಣಗಾಡಿ, ಕೊನೆಗೆ  ಸಂಸದರನ್ನು ಸುರಕ್ಷಿತವಾಗಿ ಕಟ್ಟಡದಿಂದ ಹೊರಗೆ ಕರೆದು ಕೊಂಡು ಹೋಗಿದ್ದಾರೆ. 



ಸುದ್ದಿ ಓದಿ