ಅಂತರರಾಷ್ಟ್ರೀಯ

ಅರ್ಜೆಂಟೀನಾ ಅಧ್ಯಕ್ಷರಿಗೂ ಅಮರಿಕೊಂಡ ಕರೋನ ಸೋಂಕು

ಅರ್ಜೆಂಟೀನಾ ಅಧ್ಯಕ್ಷರಿಗೂ ಅಮರಿಕೊಂಡ ಕರೋನ ಸೋಂಕು

ಬ್ಯೂನಸ್ ಏರಿಸ್,  ಏ 15 :ಅರ್ಜೆಂಟೀನಾ ಅಧ್ಯಕ್ಷ,  ಆಲ್ಬರ್ಟೊ ಫರ್ನಾಂಡೀಸ್  ಕೊರೋನ ಸೋಂಕಿಗೆ  ತುತ್ತಾಗಿದ್ದಾರೆ. ಅವರಿಗೆ ಕಳೆದ  3 ರಂದು ಸೋಂಕು ತಗುಲಿರುವುದು  ಪರೀಕ್ಷೆಯಲ್ಲಿ  ಪತ್ತೆಯಾಗಿತ್ತು. ಅವರು ಇಂದಿನಿಂದ ಕೆಲಸಕ್ಕೆ ಮರಳಲಿದ್ದಾರೆ ಎಂದು ರಾಜ್ಯದ ವೈದ್ಯಕೀಯ ತಂಡದ ಮುಖ್ಯಸ್ಥರು ತಿಳಿಸಿದ್ದಾರೆ. "ಸದ್ಯ  ಅವರಿಗೆ ಯಾವುದೇ ರೋಗ ಲಕ್ಷಣಗಳಿಲ್ಲ. ಇಂದಿನಿಂದ ಅವರು ತಮ್ಮ ಸಾಮಾನ್ಯ ಚಟುವಟಿಕೆಗಳನ್ನು ಪುನರಾರಂಭಿಸುತ್ತಾರೆ  ಎಂದು ವೈದ್ಯಕೀಯ ತಂಡ ತಿಳಿಸಿದೆ. ಫೆರ್ನಾಂಡೀಸ್ ಏಪ್ರಿಲ್ 3 ರಂದು ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು  ಅದೇ ದಿನ, ವೈದ್ಯರು ಅಧ್ಯಕ್ಷರ ಆರೋಗ್ಯಪರೀಕ್ಷೆ ಮಾಡಿ  ಸ್ಥಿರವಾಗಿದೆ ಎಂದು ಹೇಳಿದ್ದರು .  


ಸುದ್ದಿ ಓದಿ