AFGHANISTAN-COMMERCIALPLANES-AMERICA
AFGHANISTAN-COMMERCIALPLANES-AMERICA
class="ssrcss-1q0x1qg-paragraph">ಅಫ್ಘಾನಿಸ್ತಾನದಿಂದ ಜನರ ಸ್ಥಳಾಂತರಕ್ಕೆ ವಾಣಿಜ್ಯ ವಿಮಾನಗಳ ಬಳಕೆ : ಅಮೆರಿಕ
ವಾಷಿಂಗ್ಟನ್, ಆಗಸ್ಟ್ 23 ಅಫ್ಘಾನಿಸ್ತಾನದಿಂದ ಜನರನ್ನು ಸ್ಥಳಾಂತರಿಸಲು ವಾಣಿಜ್ಯ ವಿಮಾನಗಳನ್ನು ಬಳಸಲಾಗುವುದು ಎಂದು ಅಮೆರಿಕ ಹೇಳಿದೆ. ಹದಿನೆಂಟು ವಿಮಾನಗಳು ಅಫ್ಘಾನಿಸ್ತಾನದ ಹೊರಗಿನ ಸುರಕ್ಷಿತ ತಾಣಗಳಿಂದ ಜನರನ್ನು ಬೇರೆ ದೇಶಗಳಿಗೆ ಸ್ಥಳಾತರಿಸಲು ಮುಂದಾಗಿದೆ.
ಆಗಸ್ಟ್ 15 ರಂದು ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಹತಾಶೆ ಹಾಗೂ ಆತಂಕಗೊಂಡಿರುವ ಸಹಸ್ರಾರು ಜನರು ದೇಶದಿಂದ ಪಲಾಯನ ಮಾಡಲು ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಕಿಕ್ಕಿರಿದು ತುಂಬಿದ್ದಾರೆ. ಕಳೆದ ವಾರದಲ್ಲಿ ಅಮೆರಿಕ ಸುಮಾರು 28 ಸಾವಿರ ಜನರನ್ನು ಸ್ಥಳಾಂತರಿಸಿದೆ ಎಂದು ಅಧ್ಯಕ್ಷ ಜೋ ಬಿಡೆನ್ ಭಾನುವಾರ ಹೇಳಿದ್ದಾರೆ. ಆದಾಗ್ಯೂ ಕಳೆದ ವಾರಕ್ಕೆ ಹೋಲಿಸಿದರೆ ಭಾನುವಾರ ಕಾಬೂಲ ವಿಮಾನ ನಿಲ್ದಾಣದ ಹೊರಗಿನ ಪರಿಸ್ಥಿತಿ ಶಾಂತಿಯುತವಾಗಿತ್ತು ಎನ್ನಲಾಗಿದೆ.
ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಸಾವಿರಾರು ಜನರು ಸರತಿ ಸಾಲಿನಲ್ಲಿ ನಿಂತಿದ್ದರಿಂದ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ ಎಂದು ನ್ಯಾಟೋ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.