ಅಂತರರಾಷ್ಟ್ರೀಯ

ಕಂದಹಾರ್ ಪ್ರಾಂತ್ಯದಲ್ಲಿ 30 ತಾಲಿಬಾನ್ ಉಗ್ರರ ಹತ್ಯೆ- ಆಫ್ಘನ್ ಸೇನೆ

ಕಂದಹಾರ್ ಪ್ರಾಂತ್ಯದಲ್ಲಿ 30 ತಾಲಿಬಾನ್ ಉಗ್ರರ ಹತ್ಯೆ- ಆಫ್ಘನ್ ಸೇನೆ

ಕಾಬೂಲ್, ಮಾರ್ಚ್ 10 :ಅಫ್ಘಾನಿಸ್ತಾನ ಸಶಸ್ತ್ರ ಪಡೆಗಳು ದಕ್ಷಿಣ ಪ್ರಾಂತ್ಯವಾದ ಕಂದಹಾರ್‌ನಲ್ಲಿ ತಾಲಿಬಾನ್ ಉಗ್ರರ ವಿರುದ್ಧ ನಡೆಸಿದ ಕಾರ್ಯಾಚರಣೆಯಲ್ಲಿ 30 ಉಗ್ರರು ಹತರಾಗಿದ್ದು, ಇತರ 8 ಮಂದಿ ಗಾಯಗೊಂಡಿದ್ದಾರೆ ಎಂದು ಆಫ್ಘನ್ ರಕ್ಷಣಾ ಸಚಿವಾಲಯದ ವಕ್ತಾರ ಫವಾದ್ ಅಮನ್ ಬುಧವಾರ ಸ್ಪುಟ್ನಿಕ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.ಕಳೆದ 24 ಗಂಟೆಗಳಲ್ಲಿ ಪ್ರಾಂತ್ಯದ ಜಿಲ್ಲೆಗಳಾದ ಅರ್ಘಂದಾಬ್ ಮತ್ತು ಜಾರಿ ಯಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.ಕಳೆದ ಸೆಪ್ಟೆಂಬರ್‌ನಲ್ಲಿ ಕತಾರ್ ನ ದೋಹಾದಲ್ಲಿ ಆಫ್ಘನ್ ಸರ್ಕಾರ ಮತ್ತು ತಾಲಿಬಾನ್ ನಡುವೆ ಶಾಂತಿ ಮಾತುಕತೆ ನಡೆದಿದ್ದರೂ, ಆಫ್ಘಾನಿಸ್ತಾನದಲ್ಲಿ ಹಿಂಸಾಚಾರ ಮತ್ತು ಘರ್ಷಣೆಗಳು ಮುಂದುವರೆದಿವೆ. ಈ ಮಧ್ಯೆ, ಆಫ್ಘಾನಿಸ್ತಾನ ಸಶಸ್ತ್ರ ಪಡೆಗಳು ತಾಲಿಬಾನ್ ವಿರುದ್ಧದ ವಿಶೇಷ ಕಾರ್ಯಾಚರಣೆಗಳ ಬಗ್ಗೆ ನಿರಂತರವಾಗಿ ವರದಿ ಮಾಡುತ್ತಿವೆ, ಸದ್ಯ,ಆಫ್ಘಾನಿಸ್ತಾನ ನೆಲದಲ್ಲಿ ಆಫ್ಘನ್ ಪಡೆಗಳು ಮೂರನೇ ನಾಲ್ಕು ಭಾಗದಷ್ಟು ಪ್ರದೇಶವನ್ನು ನಿಯಂತ್ರಿಸುತ್ತಿವೆ ಎಂದು ಆಫ್ಘಾನಿಸ್ತಾನದಲ್ಲಿನ  ರಷ್ಯಾದ ವಿಶೇಷ ಅಧ್ಯಕ್ಷೀಯ ಪ್ರತಿನಿಧಿ ಜಮೀರ್ ಕಬುಲೋವ್ ಹೇಳಿದ್ದಾರೆ.

  


ಸುದ್ದಿ ಓದಿ