ಉತ್ತರ ಪ್ರದೇಶ: ರಸ್ತೆ ಬದಿ ಕುಳಿತಿದ್ದ ಜನರ ಮೇಲೆ ವಾಹನ ಹರಿದು ಕನಿಷ್ಠ ಮೂವರು ಸಾವು
ಇಟಾವಾ, ಏಪ್ರಿಲ್ 12 : ಉತ್ತರ ಪ್ರದೇಶದ ಈ ಜಿಲ್ಲೆಯ ಬಕೆವಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ಮುಂಜಾನೆ ರಸ್ತೆ ಬದಿಯಲ್ಲಿ ಕುಳಿತಿದ್ದ ಜನರ ಮೇಲೆ ಅಪರಿಚಿತ ಟ್ರಕ್ ಹರಿದ ಪರಿಣಾಮ ಮೂವರು ಮೃತಪಟ್ಟು, ಇತರ ಆರು ಮಂದಿ ಗಾಯಗೊಂಡಿರುವ ಘಟನೆನತದೃಷ್ಟರು ಪಂಚಾಯತ್ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳಲು ಕಾರ್ ಮೂಲಕ ನವದೆಹಲಿಯಿಂದ ಜಾನ್ಸಿಗೆ ತೆರಳುತ್ತಿದ್ದರು ಎಂದು ಎಸ್‌ಎಸ್‌ಪಿ ಡಾ.ಬ್ರಾಜೇಶ್ ಕುಮಾರ್ ಸಿಂಗ್ ಇಲ್ಲಿ ತಿಳಿಸಿದ್ದಾರೆ.ರಾಷ್ಟ್ರೀಯ ಹೆದ್ದಾರಿ 2ರ ಪೂನಂ ಡಾಬಾ ಬಳಿ ಕಾರ್ ನ ಟೈರ್ ಪಂಚರ್ ಆಗಿದ್ದರಿಂದ ಕಾರ್ ನಲ್ಲಿದ್ದವರು ರಸ್ತೆಯ ಬದಿಯಲ್ಲಿ ಕುಳಿತಿದ್ದರು. ಇದೇ ವೇಳೆ ವೇಗವಾಗಿ ಬಂದ ಟ್ರಕ್ ಅವರ ಮೇಲೆ ಹರಿದಿದೆ. ಕಾರ್ ಚಾಲಕ ಬುದ್ಧ ಸಿಂಗ್ ಮತ್ತು ಆತನ ಪುತ್ರ ದೀಪಕ್ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮತ್ತೊಬ್ಬ ವ್ಯಕ್ತಿ ಕಮರ್ಜುಮಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.