ಅಂತರರಾಷ್ಟ್ರೀಯ

ಘಾನಾದಲ್ಲಿ ಚಿನ್ನದ ಗಣಿ ಕುಸಿತ, ಮೂವರ ಸಾವು

ಘಾನಾದಲ್ಲಿ ಚಿನ್ನದ ಗಣಿ ಕುಸಿತ, ಮೂವರ ಸಾವು

ಮಾಸ್ಕೋ, ಮೇ 27: ದಕ್ಷಿಣ ಘಾನಾದಲ್ಲಿ ಅಕ್ರಮ ಚಿನ್ನದ ಗಣಿ ಕುಸಿದ ಪರಿಣಾಮ , ಮೂವರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಇತರೆ  15 ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಗಂಭೀರ ಸ್ಥಿತಿಯಲ್ಲಿ ಇಬ್ಬರನ್ನು ರಕ್ಷಣೆ ಮಾಡಿ  ಆಸ್ಪತ್ರೆಗೆ ದಾಖಲು ಮಾಡಲಾಗಿದೆ  ಎಂದು ಘಾನಾ ಸುದ್ದಿವಾಹಿನಿ ಬುಧವಾರ ತಡರಾತ್ರಿ ವರದಿ ಮಾಡಿದೆ. ಇತರ ಮಾಧ್ಯಮಗಳ  ವರದಿಯ ಪ್ರಕಾರ  ಗಣಿಯಲ್ಲಿ  40 ಕ್ಕೂ  ಜನರು ಸಿಕ್ಕೊಂಡಿದ್ದಾರೆ ಎಂದು ಹೇಳಲಾಗಿದೆ ಆದರೆ  ದುರ್ಘಟನೆಗೆ  ನಿಖರ ಕಾರಣ ಈವರೆಗೆ  ಇನ್ನೂ ಸರಿಯಾಗಿ ತಿಳಿದು ಬಂದಿಲ್ಲ. 


ಸುದ್ದಿ ಓದಿ