ಅಂತರರಾಷ್ಟ್ರೀಯ

ಈಜಿಪ್ಟ್‌ನಲ್ಲಿ ದೋಣಿ ದುರಂತ : 7 ಮಂದಿ ಸಾವು

ಈಜಿಪ್ಟ್‌ನಲ್ಲಿ  ದೋಣಿ ದುರಂತ :  7 ಮಂದಿ ಸಾವು

ಕೈರೋ, ಫೆಬ್ರವರಿ 23 :ಈಜಿಪ್ಟಿನ ಅಲೆಕ್ಸಾಂಡ್ರಿಯಾ ಬಳಿಯ ಮರಿಯಟ್ ಸರೋವರದಲ್ಲಿ ಮೀನುಗಾರಿಕಾ ದೋಣಿ ಮುಗುಚಿ ಬಿದ್ದು  ಕನಿಷ್ಠ 7 ಜನರು ಮೃತಪಟ್ಟಿದ್ದಾರೆ  ಎಂದು ಈಜಿಪ್ಟಿನ  ದಿನಪತ್ರಿಕೆ ವರದಿ ಮಾಡಿದೆ. ಸೋಮವಾರ ಅಪಘಾತದ ಸಮಯದಲ್ಲಿ ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಎಲ್ಲಾ ಸದಸ್ಯರು ಸೇರಿದಂತೆ ಹೆಚ್ಚು ಜನರು ದೋಣಿಯಲ್ಲಿ  ಪ್ರಯಾಣಿಸುತ್ತಿದ್ದರು  ಎಂದೂ  ಪತ್ರಿಕೆ ತಿಳಿಸಿದೆ.  ಸರೋವರದ ದ್ವೀಪದಿಂದ ಮನೆಗೆ ಹಿಂದಿರುಗುತ್ತಿದ್ದಾಗ ದೋಣಿ ಉರುಳಿ ಬಿದ್ದು ದುರಂತ ಸಂಭವಿಸಿದೆ. ಪರಿಹಾರ , ರಕ್ಷಣಾ  ಕಾರ್ಯರ್ತರು  ಕಾಣೆಯಾದವರಿಗಾಗಿ ವ್ಯಾಪಕ ಶೋಧ ನಡೆಸುತ್ತಿದ್ದಾರೆ . ಆದರೆ   ಅಪಘಾತದ ಕಾರಣ ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ ಎಂದೂ  ಹೇಳಲಾಗಿದೆ. 



ಸುದ್ದಿ ಓದಿ