ಕ್ಯೂಬಾದಲ್ಲಿ ಹೆಲಿಕಾಪ್ಟರ್ ಅಪಘಾತ: 5 ಸಾವು
ಮಾಸ್ಕೋ, ಜನವರಿ 30: ಕ್ಯೂಬಾದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದ ಪರಿಣಾಮವಾಗಿ ಕನಿಷ್ಠ 5 ಜನರು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮ ವರದಿ ಮಾಡಿವೆ.ಶುಕ್ರವಾರ ಮುಂಜಾನೆ ಹೆಲಿಕಾಪ್ಟರ್ ಹೊಲ್ಗುಯಿನ್ ಪ್ರಾಂತ್ಯದಿಂದ ಗ್ವಾಂಟನಾಮೊಗೆ ತೆರಳುತ್ತಿದ್ದಾಗ ಈ ದುರ್ಘಟನೆ ಜರುಗಿದೆ ಎಂದು ರಕ್ಷಣಾ ಸಚಿವಾಲಯವನ್ನು ಉಲ್ಲೇಖಿಸಿ ಕ್ಯೂಬಾ ಡಿಬೇಟ್ ಪತ್ರಿಕೆ ವರದಿ ಮಾಡಿದೆ. ಹೆಲಿಕಾಪ್ಟರ್ ಎತ್ತರದ ಪ್ರದೇಶಕ್ಕೆ ಅಪ್ಪಳಿಸಿದೆ ಎಂದು ವರದಿಯಾಗಿದೆ. ಅಪಘಾತದ ಬಗ್ಗೆ ರಕ್ಷಣಾ ಸಚಿವಾಲಯದ ಆಯೋಗ ತನಿಖೆ ಪ್ರಾರಂಭಿಸಿದೆ ಎಂದು ಹೇಳಲಾಗಿದೆ.