ಪಶ್ಚಿಮ ಆಸ್ಟ್ರೇಲಿಯಾ: ಕಾಡ್ಗಿಚ್ಚಿಗೆ 30 ಮನೆಗಳು ನಾಶ
ಮಾಸ್ಕೋ, ಫೆ 02 : ಪಶ್ಚಿಮ ಆಸ್ಟ್ರೇಲಿಯಾದಲ್ಲಿ ಸಂಭವಿಸಿರುವ ಕಾಡ್ಗಿಚ್ಚಿಗೆ ಕನಿಷ್ಠ 30 ಮನೆಗಳು ನಾಶವಾಗಿವೆ. ಸುಮಾರು 7 ಸಾವಿರ ಹೆಕ್ಟೇರ್ ಭೂಮಿಯಲ್ಲಿ ಬೆಂಕಿ ಉರಿಯುತ್ತಿದ್ದು, ಸಾವಿರಾರು ಜನರು ತಮ್ಮ ಮನೆಗಳನ್ನು ತೊರೆದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. "ಇದು ಕೇವಲ ಕೆಲವು ಮಹತ್ವದ ಆಸ್ತಿ ನಷ್ಟವಾಗಿದ್ದು, ಮತ್ತಷ್ಟು ಆಸ್ತಿ ನಾಶದ ದೃಢೀಕರಣಕ್ಕಾಗಿ ಕಾಯುತ್ತಿದ್ದೇವೆ” ಎಂದು ಹೇಳಿದ್ದಾರೆ. ನಿಯಂತ್ರಣವಿಲ್ಲದ ಕಾಡ್ಗಿಚ್ಚು ಹೆಚ್ಚಿನ ಆಸ್ತಿಯನ್ನು ನಾಶಪಡಿಸುವ ನಿರೀಕ್ಷೆಯಿದೆ. ಬೆಂಕಿಯ ಕಾರಣ ಇನ್ನೂ ತಿಳಿದುಬಂದಿಲ್ಲ.