ಶಿಕ್ಷಕರಾದವರು ಸತತ ಅಧ್ಯಯನ ಶೀಲರಾಗಿರಬೇಕು: ಮಲಬನ್ನವರ
ಮೂಡಲಗಿ 07: ಶಿಕ್ಷಕರಾದವರು ಹಾಗೂ ಶಿಕ್ಷಕರಾಗಬಯಸುವವರು ಸತತ ಅಧ್ಯಯನ ಶೀಲರಾಗಿರಬೇಕು ಹಾಗೂ ಪೂರ್ವ ತಯಾರಿಯೊಂದಿಗೆ ಪಾಠ ಮಾಡಬೇಕೆಂದು ತಾಲೂಕ ಅಕ್ಷರ ದಾಸೋಹ ನಿರ್ದೇಶಿಕ ಅಶೋಕ ಮಲಬನ್ನವರ ಹೇಳಿದರು.
ಅವರು ತಾಲೂಕಿನ ಕಲ್ಲೋಳಿ ಶಿಕ್ಷಣ ಇಲಾಖೆಯ ಸಮೂಹ ಸಂಪನ್ಮೂಲ ಕೇಂದ್ರದಲ್ಲಿ ಪ್ರಾಯೋಗಿಕ ಕಾರ್ಯಕ್ರಮ ಮತ್ತು ಗೋಕಾಕ್ ಶಿಕ್ಷಣ ಸಂಸ್ಥೆಯ ಬಿ.ಇಡಿ ಪ್ರಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಬೆಟಗೇರಿ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ರಮೇಶ್ ಅಳಗುಂಡಿ ಮಾತನಾಡಿ, ಶಿಕ್ಷಕರಾದವರು ಹಾಗೂ ಶಿಕ್ಷಕರಾಗ ಬಯಿಸುವರು ಯಾವತ್ತೂ ಶಿಸ್ತಿನಿಂದ ಹಾಗೂ ಸಮಾಜದಲ್ಲಿ ಮಾದರಿ ವ್ಯಕ್ತಿತ್ವವನ್ನು ಹೊಂದಿರಬೇಕೆಂದು ಹೇಳಿದರು.
ಕಲ್ಲೋಳಿ ಸಮೂಹ ಸಂಪನ್ಮೂಲ ವ್ಯಕ್ತಿ ಜಿ.ಕೆ.ಉಪ್ಪಾರ ಅವರು ಪ್ರಶಕ್ಷಣಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಸಮೂಹ ಸಂಪನ್ಮೂಲ ಕೇಂದ್ರದ ಕಾರ್ಯ ಚಟುವಟಿಕೆಗಳು ಹಾಗೂ ನಿರ್ವಹಿಸಬೇಕಾದ ದಾಖಲೆಗಳ ಕುರಿತು ವಿವರಿಸಿದರು, ತರಬೇತಿ ಹಂತದಲ್ಲಿ ಎಲ್ಲಾ ಪ್ರಶಿಕ್ಷಣಾರ್ಥಿಗಳು ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕೆಂದರು.
ಪ್ರಶಿಕ್ಷಣಾರ್ಥಿಗಳಿಗೆ ಕಲಿಕಾ ಚೇತರಿಕೆ ತರಬೇತಿಯನ್ನು ಆರ್ ಟಿ ಬೆಳಗಲಿ, ಬೆಟಿಗೇರಿ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಮೇಶ್ ಅಳಗುಂಡಿ, ಅರವಿಂದ್ ಚೌಡನವರ ನೀಡಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ ಹಿರಿಯ ಮುಖ್ಯ ಶಿಕ್ಷಕರಾದ ಎಸ್.ಬಿ.ಗಿಡಗೌಡರ, ಎಸ್ .ಪಿ.ಗೊಸಾಬಾಳ, ಎಸ್ ವೈ.ಮೂಡಲಗಿ, ನಿವೃತ್ತ ಗ್ರಂಥಪಾಲಕ ಬಾಲಶೇಖರ್ ಬಂದಿ, ಪ್ರಾಂಶುಪಾಲರಾದ ವಿ.ವಿ.ಮೋದಿ , ಉಪನ್ಯಾಸಕರಾದ ಸುರೇಶ್ ಮುದ್ದಾರ್, ಎಸ್.ಎಸ್.ಗಾಣಿಗೇರ್, ದೇವೇಂದ್ರ ಪತ್ತಾರ್, ಸಹ ಶಿಕ್ಷಕರಾದ ಆರ್.ವಾಯ್.ಹತ್ತಿಕಟಗಿ, ಎಸ್.ಎಸ್.ನಾಯ್ಕೋಡಿ ಉಪಸ್ಥಿತರಿದ್ದರು.