ಮೂಡಲಗಿ

ಆಸಕ್ತಿ ಕೊರತೆಯಿಂದ ಗ್ರಾಮೀಣ ಕಲಾ ಪ್ರಕಾರಗಳಿಗೆ ಹಿನ್ನಡೆ: ಬಂದಿ

ಆಸಕ್ತಿ ಕೊರತೆಯಿಂದ ಗ್ರಾಮೀಣ ಕಲಾ ಪ್ರಕಾರಗಳಿಗೆ ಹಿನ್ನಡೆ: ಬಂದಿ

ಮೂಡಲಗಿ 16: ಜೀವಂತ ಕಲೆಯಾಗಿರುವ ಜಾನಪದ, ಪುರಾತನ ಜನರ ಕಲೆ ಹಾಗೂ ಗ್ರಾಮಾಂತರ ಪ್ರದೇಶಗಳ ಕಲಾವಿದರ ಬಗೆಗಿನ ಆಸಕ್ತಿಯು ಕುಂದಿರುವ ಕಾರಣ ಇಂದು ಗ್ರಾಮೀಣ ಕಲಾ ಪ್ರಕಾರಗಳು ಹಿನ್ನಡೆ ಕಾಣುತ್ತಿವೆ ಎಂದು ಸಾಹಿತ್ಯ ಬಾಲಶೇಖರ ಬಂದಿ ಹೇಳಿದರು. 

ತಾಲೂಕಿನ ಖಾನಟ್ಟಿ ಗ್ರಾಮದ ಜನಪದ ಕಲಾವಿದ ಚಂದ್ರ​‍್ಪ ಪೋತರಾಜರವರ ಪ್ರಥಮ ಪುಣ್ಯಸ್ಮರಣೋತ್ಸವ ಹಾಗೂ ತಾಲೂಕಿನ ಕಲಾವಿದರರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪತ್ರಿ ಕಲೆಗಳಿಗೂ ಜನದಪ ಕಲೆಗಳೆ ಅಡಿಪಾಯವಾಗಿದೆ. ನಮ್ಮ ಆಚಾರ-ವಿಚಾರ, ಸಂಸ್ಕೃತಿ- ಸಂಸ್ಕಾರ ಮತ್ತು ಸಾಂಸ್ಕೃತಿಕ ಜಗತ್ತಿಗೂ ಇದು ತನ್ನದೇ ಆದ ಛಾಪನ್ನೂ ಮೂಡಿಸಿದೆ. ಈ ಕಾರಣ ಜಾನಪದ ಕಲೆ ಪ್ರಕಾರಗಳನ್ನು ಉಳಿಸಿ ಬೆಳೆಸುವತ್ತ ಎಲ್ಲರೂ ಗಮನ ಹರಿಸಬೇಕಾಗಿದೆ ಎಂದರು. 

ತನ್ನ ಮೂಲ ಸಂಸ್ಕೃತಿಯನ್ನು ಈಗಲೂ ಉಳಿಸಿ ಕೊಂಡಿರುವ ಸ್ಥಳೀಯ ಜಾನಪದ ಕಲೆಗಳಲ್ಲಿ ತೊಡಗಿಸಿಕೊಂಡಿರುವ ಗ್ರಾಮೀಣ ಪ್ರದೇಶಗಳ ಕಲಾವಿದರಿಗೆ ಸರ್ಕಾರದ ತಾರತಮ್ಯದಿಂದಲೇ ನೋಡುತ್ತಿದೆ. ಸೂಕ್ತ ಹಾಗೂ ಸಮರ​‍್ಕ ಪ್ರೋತ್ಸಾಹವನ್ನು ನೀಡುತ್ತಿಲ್ಲ. ಶಿಷ್ಟ ಸಾಹಿತ್ಯ ಕಲಾವಿದರಿಗೆ ದೊರಕುತ್ತಿರುವ ಮನ್ನಣೆ ಜಾನಪದ ಕಲಾವಿದರುಗಳಿಗೆ ಸಿಗುತ್ತಿಲ್ಲ ಎಂದು ವಿಷಾಧ ವ್ಯಕ್ತಪಡಿಸಿರು. 

ಮಹಾದೇವಪ್ಪ ಐಹೊಳೆ, ಎಸ್ ಬಿ ಹೆಬ್ಬಾಳ, ಎಸ್ ಎಮ್ ಐಹೊಳೆ, ವಿನೋಧ ಬೈರನಟ್ಟಿ, ರವಿ ತುಪ್ಪದ, ಗುರು ಪಾಟೀಲ, ಬಿ ಎ ದೇಸಾಯಿ, ಶಿವಕುಮಾರ, ಅಶೋಕ ಪೋತರಾಜ, ವಿಠ್ಠಲ ಪೋತರಾಜ, ಡಾ. ಮಹಾದೇವ ಪೋತರಾಜ ಹಾಗೂ ಗ್ರಾಮದ ಮುಖಂಡರು ಉಪಸ್ಥಿತಿರಿದ್ದರು. 


ಸುದ್ದಿ ಓದಿ