ಮೂಡಲಗಿ

ಪಡಿತರಕ್ಕೆ ಕನ್ನಹಾಕುವವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಮನವಿ

ಪಡಿತರಕ್ಕೆ ಕನ್ನಹಾಕುವವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಮನವಿ

ಮೂಡಲಗಿ: 29 ಬಡವರಿಗರ ಸರಕಾರ ಉಚಿತವಾಗಿ ನೀಡುತ್ತಿರುವ ಪಡಿತರಕ್ಕೆ ಕನ್ನಹಾಕುತ್ತಿರುವವರ ವಿರುದ್ಧ ತಾಲೂಕಾ ದಂಡಾಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಸರಕಾರದ ಪಡಿತರ ಸೌಲಭ್ಯಗಳನ್ನು ಬಡವರಿಗೆ ಒದಗಿಸಿ ಕೊಡುವಲ್ಲಿ ಮುಂದಾಗಬೇಕು ಎಂದು ಕರ್ನಾಟಕ ನವನಿರ್ಮಾಣ ಸೇನೆ ಮೂಡಲಗಿ ತಾಲೂಕಾಧ್ಯಕ್ಷ ಸಚೀನ್ ಲೆಂಕೆನ್ನವರ ಹೇಳಿದರು  

ಮಂಗಳವಾರ ಮೂಡಲಗಿ ತಾಲೂಕಿನ ಶಿವಾಪೂರ(ಹ) ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಸರಕಾರದಿಂದ ನಿಡಲಾಗಿರುವ ಉಚಿತ ಪಡಿತರವನ್ನು ಗ್ರಾಮದ ಗ್ರಾಹಕರಿಗೆ ಸರಿಯಾದ ತೂಕದಲ್ಲಿ ಹಂಚಿಕೆ ಮಾಡದೆ ಇರುವ ಆರೋಪಕ್ಕೆ ಸಂಭಂದಿಸಿದಂತೆ ಮೂಡಲಗಿ ತಾಲೂಕಾ ತಹಶೀಲ್ದಾರ ಗ್ರೇಡ್ 2 ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು. ಪ್ರತಿ ಕುಟುಂಬದ ಪ್ರತಿ ಕಾರ್ಡಿಗೆ 1 ಕೆ.ಜಿ. ಅಕ್ಕಿಯನ್ನು ಕಡಿಮೆ ತೂಕದಲ್ಲಿ ವಿತರಿಸುತ್ತಿರುವುದು ಸ್ಥಳಿಯ ಸಂಘಟನೆಗಳ ಕಾರ್ಯಾಚರಣೆಯಿಂದ ತಿಳಿದು ಬಂದಿದೆ.  

ಈ ವಿಚಾರವಾಗಿ ಸಂಘಟಕರು ಮೂಡಲಗಿ ಆಹಾರ ನಿರಿಕ್ಷಕರಿಗೆ ಮೊಬೈಲ ಸಂಪರ್ಕ ಮಾಡಿದಾಗ ಕರೆಯನ್ನು ಸ್ವೀಕರಿಸದೆನಿರಾಕರಿಸಿದ್ದು ಅಧಿಕಾರಿಗಳ ದಿವ್ಯ ನಿರ್ಲಕ್ಷವನ್ನು ಎತ್ತಿ ತೋರಿಸುತ್ತದೆ. ಈ ಕೂಡಲೇ ತಾಲೂಕಾ ದಂಡಾಧಿಕಾರಿಗಳು ಈ ವಿಚಾರವನ್ನು ಗಂಭಿರವಾಗಿ ಪರಿಗಣಿಸಿ ಆಹಾರ ನಿರಿಕ್ಷಕ ಅಧಿಕಾರಿ ಹಾಗೂ ಶಿವಾಪೂರ(ಹ) ಗ್ರಾಮದ ತಪ್ಪಿತಸ್ಥ ನ್ಯಾಯ ಬೆಲೆ ಅಂಗಡಿಕಾರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಸಾರ್ವಜನಿಕರಿಗೆ ನ್ಯಾಯ ಒದಗಿಸಬೇಕೆಂದು ವಿನಂತಿಸಿದರು. ಒಂದು ವೇಳೆ ಇದೆ ರೀತಿಯಾಗಿ ಅವ್ಯವಹಾರಗಳು ಮುಂದುವರಿದಲ್ಲಿ ಕರ್ನಾಟಕ ನವನಿರ್ಮಾಣ ಸೇನೆ ಮೂಡಲಗಿ ತಾಲೂಕಾ ಘಟಕದ ವತಿಯಿಂದ ಉಗ್ರವಾದ ಹೊರಾಟವನ್ನು ಮಾಡಲಾಗುವುದು. 

ಕರ್ನಾಟಕ ನವನಿರ್ಮಾಣ ಸೇನೆ ಮನವಿ ಸ್ವೀಕರಸಿ ಮಾತನಾಡಿದ ಮೂಡಲಗಿ ತಾಲೂಕಾ ತಹಶೀಲ್ದಾರ ಗ್ರೇಡ್ 2 ಶಿವಾನಂದ ಬಬಲಿರವರು ಸೂಕ್ತ ತನಿಖೆ ನಡಸಿ ಕಾನೂನು ಕ್ರಮ ಕೈಗೂಳ್ಳುವುದಾಗಿ ತಿಳಿಸಿದರು  

ಮಹಾಂತೇಶ ಮುಗಳಖೋಡ , ಭರತರಾಜ ಪಾಟೀಲ, ಸುರೇಶ ಪಾಟೀಲಚೇತನ ಪಾಟೀಲ, ಲಕ್ಕಪ್ಪ ನಾಯಕ, ಬಸವರಾಜ ನಾಯಕ, ಸುನೀಲ ಗಸ್ತಿ, ಶ್ರೀದರ ಹೋಸಕೋಟೆ,  ಯುನುಸ ನಾಗರಾಳ, ಮಲ್ಲು ಪಾಟೀಲ, ಅಜೀತ ಕಂಕಣವಾಡಿ, ಇತರರು ಉಪಸ್ಥಿತರಿದ್ದರು  



ಸುದ್ದಿ ಓದಿ