ಮೂಡಲಗಿ

ಮನುಷ್ಯ ತಾನು ಬೆಳೆದು ಎಲ್ಲರನ್ನೂ ಬೆಳೆಸಬೇಕು: ಗವಿಸಿದ್ದೇಶ್ವರಶ್ರೀ

ಮನುಷ್ಯ ತಾನು ಬೆಳೆದು ಎಲ್ಲರನ್ನೂ ಬೆಳೆಸಬೇಕು: ಗವಿಸಿದ್ದೇಶ್ವರಶ್ರೀ

ಮೂಡಲಗಿ 26: ಮನುಷ್ಯ ತನ್ನ ಬದುಕಿನಲ್ಲಿ ಆರ್ಥಿಕತೆಯ ಜೊತೆಗೆ ಸಮಾಜದ ಸಾರ್ಥಕತೆಯನ್ನು ಕಾಣಬೇಕು ಎಂದು ಕೊಪ್ಪಳದ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.  

ಇಲ್ಲಿಯ ಬಸವೇಶ್ವರ ಅರ್ಬನ್ ಕೋ. ಆಪ್ ಕ್ರೆಡಿಟ್ ಸೊಸೈಟಿಯ ಬೆಳ್ಳಿ ಮಹೋತ್ಸವ ನೆನಪಿಗಾಗಿ ನಿರ್ಮಿಸಿರುವ ಅತಿಥಿ ಗೃಹ ಮತ್ತು ವಾಹನ ನಿಲುಗಡೆ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಸಮಾಜದಲ್ಲಿ ತಾನು ಬೆಳೆಯುವುದರೊಂದಿಗೆ ಎಲ್ಲರನ್ನೂ ಬೆಳೆಸಬೇಕು. ಸಮಷ್ಟಿ ಭಾವನೆ ಇರಬೇಕು ಎಂದರು. 

12ನೇ ಶತಮಾನದಲ್ಲಿ ಬಸವಾದಿ ಶರಣರು ಕಾಯಕ ಮತ್ತು ದಾಸೋಹದ ಮೂಲಕ ಆರ್ಥಿಕತೆ ಮತ್ತು ಸಾರ್ಥಕತೆಯನ್ನು ಪ್ರತಿಪಾದಿಸಿದ್ದರು. ಕ್ಷಣಿಕವಾದ ಬದುಕಿನಲ್ಲಿ ಸಮಾಜಕ್ಕೆ ಒಳಿತನ್ನು ಮಾಡುವ ಮೂಲಕ ಬದುಕನ್ನು ಸುಂದರವಾಗಿಸಿಕೊಳ್ಳಬೇಕು ಎಂದರು. 

ಮೂಡಲಗಿಯ ಬಸವೇಶ್ವರ ಸೊಸೈಟಿಯು ಆರ್ಥಿಕತೆಯ ಜೊತೆಗೆ ಸಮಾಜಕ್ಕೆ ದೊಡ್ಡ ಕೊಡುಗೆಯನ್ನು ನೀಡಿದೆ. ಇದು ಶ್ಲಾಘನೀಯವಾದ ಕಾರ್ಯವಾಗಿದೆ ಎಂದರು. 

ಸೊಸೈಟಿಯ ಆಡಳಿತ ಮಂಡಳಿಯವರು ಶ್ರೀಗಳನ್ನು ಸನ್ಮಾನಿಸಿ ಗೌರವಿಸಿದರು. 

ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್‌.ಜಿ. ಢವಳೇಶ್ವರ, ಮೂಡಲಗಿ ಅರ್ಬನ್ ಬ್ಯಾಂಕ್ ಉಪಾಧ್ಯಕ್ಷ ನವೀನ ಬಡಗಣ್ಣವರ, ನಿರ್ದೇಶಕ ರುದ್ರ​‍್ಪ ವಾಲಿ, ಸೊಸೈಟಿ ಅಧ್ಯಕ್ಷ ಬಸವರಾಜ ತೇಲಿ, ಉಪಾಧ್ಯಕ್ಷ ಗೀರೀಶ ಢವಳೇಶ್ವರ, ನಿರ್ದೇಶಕರಾದ ಚನ್ನಬಸು ಬಡ್ಡಿ, ಶ್ರೀಕಾಂತ ಹಿರೇಮಠ, ರವೀಂದ್ರ ಭಾಗೋಜಿ, ಶ್ರೀಶೈಲ್ ಮದಗನ್ನವರ, ಮಲ್ಲಿಕಾರ್ಜನು ಢವಳೇಶ್ವರ, ರೇವಪ್ಪ ಕೌಜಲಗಿ, ಕುಸುಮಾ ತೇಲಿ, ಸುಮಿತ್ರಾ ಶೇಡಬಾಳ, ಮಹಾದೇವಿ ಹಿರೇಮಠ, ಲಕ್ಷ್ಮಣ ತೆಳಗಡೆ, ಪ್ರಧಾನ ವ್ಯವಸ್ಥಾಪಕ ಬಸವರಾಜ ಬಡಿಗೇರ ಇದ್ದರು. 


ಸುದ್ದಿ ಓದಿ