ಮೂಡಲಗಿ

ಅಪಾರ ಜನಸ್ತೋಮ, ಜಯಘೋಷಣೆಯಲ್ಲಿ ಹಗ್ಗವಿಲ್ಲದೆ ರಥೋತ್ಸವ

ಅಪಾರ ಜನಸ್ತೋಮ, ಜಯಘೋಷಣೆಯಲ್ಲಿ ಹಗ್ಗವಿಲ್ಲದೆ ರಥೋತ್ಸವ

ಲೋಕದರ್ಶನ ವರದಿ 

ಮೂಡಲಗಿ 13: ತಾಲೂಕಿನ ಸುಣಧೋಳಿ ಗ್ರಾಮದಲ್ಲಿ ಪ್ರತಿ ವರ್ಷ ದವನದ ಹುಣ್ಣಿಮೆ ಮುಗಿದ ನಾಲ್ಕನೇ ದಿನಕ್ಕೆ ಜರುಗುವ ಪವಾಡ ಪುರಷ ಜಡಿಸಿದ್ಧೇಶ್ವರ ಶ್ರೀಗಳ ಹಗ್ಗವಿಲ್ಲದೆ ರಥೋತ್ಸವ ಸೋಮವಾರ ಸಂಜೆ ಶ್ರೀಮಠದ ಶಿವಾನಂದ ಸ್ವಾಮೀಜಿಗಳ ಸಾನಿಧ್ಯದಲ್ಲಿ ಸಡಗರ ಸಂಭ್ರಮದಿಂದ ಅಪಾರ ಜನಸ್ತೋಮದ ಜಯಘೋಷಣೆಯಲ್ಲಿ ಜರುಗಿತು. 

  ಜಾತ್ರಾಮಹೋತ್ಸವ ನಿಮಿತ್ಯವಾಗಿ ಮಠದಲ್ಲಿ ಮುಂಜಾನೆ ರುದ್ರಾಭಿಷೇಕ, 10 ಗಂಟೆಗೆ ಸಕಲ ವಾದ್ಯ ಮೇಳದೊಂದಿಗೆ ಗ್ರಾಮಾಂತರ ಕಳಸ ಮೆರವಣಿಗೆ ಜರುಗಿದವು, ಸಂಜೆ ಹೂ ಪುಷ್ಪಗಳಿಂದ ಶೃಂಗರಿಸಲಾಗಿದ್ದ ರಥೋತ್ಸವಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಶಿವಾನಂದ ಶ್ರೀಗಳೊಂದಿಗೆ ಅಪಾರ ಭಕ್ತ ಸಮೂಹ ಹರ ಹರ ಮಹಾದೇವ ಎಂಬ ಜಯಘೋಷದೊಂದಿಗೆ ಹಗ್ಗವಿಲ್ಲದೆ ಜರುಗುವ ರಥೋತ್ಸವಕ್ಕೆ ಭಕ್ತಾಧಿಗಳು ಬಾಳೆ ಹಣ್ಣು, ಬೆಂಡು-ಬೆತ್ತಾಸು, ಕಾರಿಕು, ತೆಂಗಿನಕಾಯಿ ಸಮರ​‍್ಿಸಿ ತಮ್ಮ ಹರಕೆಯನ್ನು ತೀರಿಸಿ ಪುನೀತರಾದರು.  

   ರಥೋತ್ಸವದಲ್ಲಿ ಸುಣಧೋಳಿ ಹಾಗೂ ವಿವಿಧ ಗ್ರಾಮಗಳ ದೇವರುಗಳ ಉತ್ಸವ ಮೂರ್ತಿ, ವಾಲಗ ಮತ್ತು ಪಲ್ಲಕ್ಕಿಗಳು ವಿಷೇಶ ಮೇರಗು ನೀಡಿದವು, ಜಡಿಸಿದ್ಧೇಶ್ವರ ಜಾತ್ರೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ಗೋವಾ, ಮಹಾರಾಷ್ಟ್ರ, ಆಂದ್ರ​‍್ರದೇಶಗಳಿಂದ ಆಗಮಿಸಿದ್ದ ಭಕ್ತಾಧಿಗಳು ಆಗಮಿಸಿದ್ದರು. 


ಸುದ್ದಿ ಓದಿ