ಸಮಾಜಮುಖಿ ಪತ್ರಕರ್ತ ಸುಭಾಷ ದಲಾಲರಿಗೆ ಭಾವಪೂರ್ಣ ನಮನ

ಸಮಾಜಮುಖಿ ಪತ್ರಕರ್ತ ಸುಭಾಷ ದಲಾಲರಿಗೆ ಭಾವಪೂರ್ಣ ನಮನ A heartfelt tribute to social activist journalist Subhash Dalal

ಚಿಕ್ಕೋಡಿ 29: ನೇರನುಡಿಯ ಪತ್ರಕರ್ತರಾಗಿದ್ದ ಸುಭಾಷ ದಲಾಲ ಅವರು ಸಮಾಜದ ಸಮಸ್ಯೆಗಳ ಬಗ್ಗೆ ಅಪಾರ ಕಳಕಳಿ ಹೊಂದಿದ್ದರು. ಅವರ ಬರಹಗಳು ಸದಾ ಜನಪರವಾಗಿದ್ದು, ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಜನಸೇವೆಗೆ ಬದ್ಧರಾಗಿದ್ದರು. ಅವರ ಅಗಲಿಕೆ ಪತ್ರಿಕಾ ವಲಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಾಹಿತಿಗಳು ಹಾಗೂ ಖ್ಯಾತ ವೈದ್ಯರಾದ ಡಾ.ದಯಾನಂದ ನೂಲಿ ಹೇಳಿದರು.ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಪತ್ರಿಕಾ ಬಳಗದಿಂದ ಇತ್ತೀಚೆಗೆ ನಿಧನರಾದ ಹಿರಿಯ ಪತ್ರಕರ್ತ ಸುಭಾಷ ದಲಾಲ ಅವರ ಶ್ರದ್ದಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

 ಸುಭಾಷ ದಲಾಲ ಅವರು ಅಧಿಕಾರ ವರ್ಗದೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು, ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಸದಾ ಮುಂಚೂಣಿಯಲ್ಲಿದ್ದರು ಎಂದು ಅವರು ಸ್ಮರಿಸಿದರು.ತಹಶಿಲ್ದಾರ ರಾಜೇಶ ಬುರ್ಲಿ ಮಾತನಾಡಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಲು ಶ್ರಮಿಸುವ ಪತ್ರಕರ್ತರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು. ಪತ್ರಕರ್ತರ ಬೇಡಿಕೆಗಳಾದ ಪತ್ರಿಕಾ ಭವನ ನಿರ್ಮಾಣ ಹಾಗೂ ವಾರ್ತಾ ಇಲಾಖೆ ಕಚೇರಿ ಆರಂಭಿಸುವ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಹಶೀಲ್ದಾರರು ಭರವಸೆ ನೀಡಿದರು.

ನೌಕರ ಸಂಘದ ಜಿಲ್ಲಾಧ್ಯಕ್ಷ ಬಿ.ಎ.ಕುಂಬಾರ. ಸಾಹಿತಿಗಳಾದ ಎಸ್.ವೈ. ಹಂಜಿ, ಸುಬ್ಬರಾವ್ ಎಂಟತ್ತಿನ್ನವರ, ಸಮಾಜಸೇವಕ ಮಂಜುನಾಥ ರೊಟ್ಟಿ, ಪತ್ರಕರ್ತರಾದ ಮಹಾವೀರ ಮೆಕ್ಕಳಿಕೆ, ರಾಜು ಸಂಕೇಶ್ವರಿ, ಚೇತನ ಹೊಳೆಪ್ಪಗೊಳ, ರಾಜೇಂದ್ರ ಕೋಳಿ, ಸಿದ್ಧೇಶ ಪುಠಾಣಿ ಸೇರಿದಂತೆ ಹಲವರು ಮಾತನಾಡಿದರು.ತಾಪಂ ಸಹಾಯಕ ನಿರ್ದೇಶಕ ಶಿವಾನಂದ ಶಿರಗಾಂವಿ, ಡಯಟ್ ಪ್ರಾಚಾರ್ಯ ಸಂಜು ಹುಲ್ಲೋಳಿ, ಚಂದ್ರಕಾಂತ ಅರಭಾಂವಿ, ಎನ್.ಜಿ. ಪಾಟೀಲ, ಆನಂದ ಅರವಾರೆ, ಸದಾಶಿವ ಹಾದಿಮನಿ. ಮಹಾದೇವ ಪೂಜೇರಿ, ಆನಂದ ಬೊಮ್ಮನ್ನವರ, ಸಂಜೀವ ಕಾಂಬಳೆ, ರವಿ ಮಂಗಾವಿ, ಮುಸ್ತಾಕ ಪಿರಜಾದೆ, ಸುಶಾಂತ್ ಜಮಖಂಡಿಕರ್, ಡಿ.ಕೆ. ಉಪ್ಪಾರ, ಕಾಶಿನಾಥ ಸುಳಕೊಡೆ, ವಿನಾಯಕ ಮೇತ್ರೆ, ರಘು ಲಿಂಬಿಗಿಡದ, ಮಹಾಂತೇಶ ಮಠಪತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.