ಬೆಟಗೇರಿ ಸಿಆರ್‌ಸಿ ವ್ಯಾಪ್ತಿಯಲ್ಲಿ ಅದ್ಧೂರಿಯಾಗಿ ನಡೆದ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

ಬೆಟಗೇರಿ ಸಿಆರ್‌ಸಿ ವ್ಯಾಪ್ತಿಯಲ್ಲಿ ಅದ್ಧೂರಿಯಾಗಿ ನಡೆದ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ  A grand primary school commencement ceremony was held within the Betageri CRC area

ಲೋಕದರ್ಶನ ವರದಿ 

ಬೆಟಗೇರಿ 01 : ಮೂಡಲಗಿ ಶೈಕ್ಷಣಿಕ ವಲಯದ ಬೆಟಗೇರಿ ಸಿಆರ್‌ಸಿ ವಲಯ ವ್ಯಾಪ್ತಿಯ ಬೆಟಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಕೇಂದ್ರ ಶಾಲೆಯ ಎಲ್ಲ ಸರ್ಕಾರಿ ಹಿರಿಯ ಮತ್ತು ಕಿರಿಯ ಹಾಗೂ ತೋಟದ ಕಿರಿಯ ಪ್ರಾಥಮಿಕ ಕನ್ನಡ ಶಾಲೆಗಳಲ್ಲಿ ಸನ್ 2026-27ನೇ ಸಾಲಿನ ಶೈಕ್ಷಣಿಕ ವರ್ಷಾರಂಭದ ಪ್ರಯುಕ್ತ ಶಾಲಾ ಪ್ರಾರಂಭೋತ್ಸವ, ಪಠ್ಯ ಪುಸ್ತಕ ಮತ್ತು ಸಮವಸ್ತ್ರ ವಿತರಣೆ  ಕಾರ್ಯಕ್ರಮ ಜೂ.1 ರಂದು ಸಡಗರದಿಂದ ನಡೆಯಿತು. 

ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಕೇಂದ್ರ ಶಾಲೆಯ ಇಲ್ಲಿಯ ಶಿಕ್ಷಣಪ್ರೇಮಿ ಶಿವಾಜಿ ನೀಲಣ್ಣವರ ಅಕ್ಷರ ಬಂಡಿ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲಾ ಮಕ್ಕಳಿಗೆ ಹೂ ಮತ್ತು ಸಿಹಿ ನೀಡಿ ಶಾಲೆಯ ಶಿಕ್ಷಕರು, ಶಿಕ್ಷಣಪ್ರೇಮಿಗಳು ಬರಮಾಡಿಕೊಂಡ ನಂತರ ಸರಸ್ವತಿ ಭಾವಚಿತ್ರಕ್ಕೆ ಮಹಾಪೂಜಾ ಕಾರ್ಯಕ್ರಮ ನಡೆಯಿತು.  ಅಕ್ಷರ ಬಂಡಿ(ಚಕ್ಕಡಿ)ಗೆ ಹೂಡಿದ ಎತ್ತುಗಳನ್ನು ಶೃಂಗರಿಸಿ, ಬಂಡಿಯಲ್ಲಿ ಶಾಲಾ ಮಕ್ಕಳನ್ನು ಕೂಡ್ರಿಸಿ, ಶಾಲಾ ಪ್ರಾರಂಭ, ಮಕ್ಕಳ ದಾಖಲಾತಿ ಸೇರಿದಂತೆ ಹಲವಾರು ಶಿಕ್ಷಣದ ಘೋಷ ವಾಕ್ಯಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳು ಕೂಗುತ್ತಾ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ನಡೆದ ಬಳಿಕ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ, ಸಮವಸ್ತ್ರ ವಿತರಣೆ ಮಾಡಲಾಯಿತು.  

ಬೆಟಗೇರಿ ಸಿಆರ್‌ಸಿ ವಲಯ: ಮೂಡಲಗಿ ಶೈಕ್ಷಣಿಕ ವಲಯದ ಬೆಟಗೇರಿ ಸಿಆರ್‌ಸಿ ವಲಯ ವ್ಯಾಪ್ತಿಯ ಬೆಟಗೇರಿ, ಬಿಲಕುಂದಿ, ತಪಸಿ, ಕೆಮ್ಮನಕೋಲ, ನಿಂಗಾಪೂರ, ಬಗರನಾಳ ಸೇರಿದಂತೆ ಎಲ್ಲ ಸರ್ಕಾರಿ ಹಿರಿಯ ಮತ್ತು ಕಿರಿಯ ಹಾಗೂ ಎಲ್ಲಾ ಪ್ರಾಥಮಿಕ ತೋಟದ ಕಿರಿಯ ಕನ್ನಡ ಶಾಲೆಗಳಲ್ಲಿ ಜೂ.1ರಂದು ಬೆಳಗ್ಗೆ 10 ಗಂಟೆಗೆ ಶಾಲಾ ಪ್ರಾರಂಭೋತ್ಸವ ಸಡಗರ ಸಂಭ್ರಮದಿಂದ ನಡೆದ ಬಳಿಕ ಶಾಲಾ ಮಕ್ಕಳಿಗೆ ಸಿಹಿ, ಪಠ್ಯ ಪುಸ್ತಕ ಹಾಗೂ ಸಮವಸ್ತ್ರ ವಿತರಣೆ ಮಾಡಲಾಗಿದೆ ಎಂದು ಬೆಟಗೇರಿ ಸಿಆರ್‌ಸಿ ವಲಯ ಸಮೂಹ ಸಂಪನ್ಮೂಲ ವ್ಯಕ್ತಿ  ಎಂ.ಬಿ.ನಾಯ್ಕರ ತಿಳಿಸಿದ್ದಾರೆ. 

ಬಸವರಾಜ ಪಣದಿ, ಈರಣ್ಣ ಬಳಿಗಾರ, ಶ್ರೀಶೈಲ ಗಾಣಗಿ, ಶಿವರುದ್ರಗೌಡ ದೇಯಣ್ಣವರ, ಶಂಕರ ಕನೋಜಿ, ನಾಗಪ್ಪ ಬಾಣಸಿ, ವಿಶ್ವನಾಥ ಶೀಗಿಹಳ್ಳಿ, ಮಲ್ಲಿಕಾರ್ಜುನ ನೀಲಣ್ಣವರ, ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಗಳ ಮುಖ್ಯ ಶಿಕ್ಷಕ ವೈ.ಸಿ.ಶೀಗಿಹಳ್ಳಿ, ಸಿದ್ದಣ್ಣ ಸನದಿ, ಉಭಯ ಶಾಲೆಗಳ ಎಸ್‌ಡಿಎಮ್‌ಸಿ ಅಧ್ಯಕ್ಷ ದುಂಡಪ್ಪ ಕಂಬಿ, ಸಿದ್ಧಾರೂಢ ವಡೇರ, ಎಸ್‌ಡಿಎಮ್‌ಸಿ ಸದಸ್ಯರು, ಶಿಕ್ಷಕರು, ಅತಿಥಿಶಿಕ್ಷಕರು, ಬಿಸಿಯೂಟ ಅಡುಗೆ ಸಿಬ್ಬಂದಿ, ಪಾಲಕರು, ಶಿಕ್ಷಣ ಪ್ರೇಮಿಗಳು ಇದ್ದರು.