ಅಂತರರಾಷ್ಟ್ರೀಯ

ದೇಶ ರಕ್ಷಣೆಗೆ ಕೈಯಲ್ಲಿ ಬಂದೂಕು ಹಿಡಿದ ಉಕ್ರೇನ್ ಮಾಜಿ ಸುಂದರಿ?

ದೇಶ ರಕ್ಷಣೆಗೆ ಕೈಯಲ್ಲಿ ಬಂದೂಕು ಹಿಡಿದ ಉಕ್ರೇನ್ ಮಾಜಿ ಸುಂದರಿ?

ಕೈವ್: ಫೆಬ್ರವರಿ 28: ಕಳೆದ ಐದು ದಿನಗಳಿಂದ ಉಕ್ರೇನ್ ಮತ್ತು ರಷ್ಯಾ ನಡುವೆ ಮಿಲಿಟರಿ ಕಾರ್ಯಾಚರಣೆ ಮುಂದುವರೆದಿದ್ದು, ಉಕ್ರೇನ್ ನ ಮಾಜಿ ಸುಂದರಿ ರಷ್ಯಾ ಪಡೆ ವಿರುದ್ಧ ಹೋರಾಡಲು ಉಕ್ರೇನ್ ಪಡೆ ಸೇರಿದ್ದಾರೆ.

2015 ರಲ್ಲಿ ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ ಸೌಂದರ್ಯ ಸ್ಪರ್ಧೆಯಲ್ಲಿ ಉಕ್ರೇನ್ ಅನ್ನು ಪ್ರತಿನಿಧಿಸಿದ್ದ ಅನಸ್ತಾಸಿಯಾ ಲೆನ್ನಾ ಈಗ ರಷ್ಯಾದ ಪಡೆಗಳೊಂದಿಗೆ ಹೋರಾಡಲು ಉಕ್ರೇನಿಯನ್ ಮಿಲಿಟರಿಗೆ ಸೇರುತ್ತಿದ್ದಾರೆ.

“ಆಕ್ರಮಣ ಮಾಡುವ ಉದ್ದೇಶದಿಂದ ಉಕ್ರೇನಿಯನ್ ಗಡಿಯನ್ನು ದಾಟಿದ ಪ್ರತಿಯೊಬ್ಬರೂ ಕೊಲ್ಲಲ್ಪಡುತ್ತಾರೆ!” ಎಂದು ಹೇಳಿರುವ ಮಾಜಿ ಸೌಂದರ್ಯ ರಾಣಿ ಮಿಲಿಟರಿ ಗೇರ್ ಧರಿಸಿ, ಆಕ್ರಮಣಕಾರಿ ರೈಫಲ್‌ನೊಂದಿಗೆ ಫೋಟೋ ಮತ್ತು ವೀಡಿಯೊವನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ಅನಸ್ತಾಸಿಯಾ ಲೆನ್ನಾ ಕೂಡ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯನ್ನು ಬೆಂಬಲ ಸೂಚಿಸುವ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ. ಅಧ್ಯಕ್ಷ ಝೆಲೆನ್ಸ್ಕಿಯನ್ನು “ನಿಜವಾದ ಮತ್ತು ಬಲಿಷ್ಠ ನಾಯಕ” ಎಂದು ಶ್ಲಾಘಿಸಿದ್ದಾರೆ.

ಸುದ್ದಿ ಓದಿ