ಅಂಟಿಗಾ ದ್ವೀಪದಿಂದ ಪರಾರಿಯಾದ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ
ಆಂಟಿಗಾ, ಮೇ 25: ಭಾರತ ತೊರೆದು ಅಂಟಿಗಾ ದ್ವೀಪ ರಾಷ್ಟ್ರದಲ್ಲಿ ನೆಲೆಯೂರಿದ್ದ ವಜ್ರ ವ್ಯಾಪಾರಿ , ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಪ್ರಮುಖ ಆರೋಪಿ,ಹಾಗೂ ಗೀತಾಂಜಲಿ ಸಮೂಹದ ಮೆಹುಲ್ ಚೋಕ್ಸಿ ಸದ್ಯ ಅಲ್ಲಿಂದಲೂ ತಲೆಮರೆಸಿಕೊಂಡು ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕಿನ ಮುಂಬೈ ಶಾಖೆಯೊಂದರಲ್ಲಿ 13,ಸಾವಿರ ಕೋಟಿ ರೂಪಾಯಿ ವಂಚನೆ ಮತ್ತು ಅಕ್ರಮ ವಹಿವಾಟು ಪ್ರಕರಣಕ್ಕೆ ಸಂಬಂಧಿಸಿದಂತೆ ನೀರವ್ ಮೋದಿ ಜತೆಗೆ ಮೆಹುಲ್ ಚೊಕ್ಸಿ ಕೂಡಾ ಆರೋಪಿಯಾಗಿದ್ದಾರೆ.
ಆಂಟಿಗುವ ಸ್ಥಳೀಯ ಮಾಧ್ಯಮ ವರದಿಯ ಪ್ರಕಾರ ಭಾನುವಾರದಿಂದಲೇ ಮೆಹುಲ್ ಚೋಕ್ಸಿಗಾಗಿ ತೀವ್ರ ಹುಡುಕಾಟ ನಡೆಸಲಾಗಿದೆ ಎಂಬುದನ್ನು ಅಲ್ಲಿನ ಪೊಲೀಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ.