ಮದುವಣಗಿತ್ತಿಯಂತೆ ಶೃಂಗಾರ ಗೊಂಡ ಕಾರವಾರ
A caravan decorated like a bride
ಕಾರವಾರ, 21 : ಕರಾವಳಿ ಉತ್ಸವ 2025, ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಇಡೀ ಕಾರವಾರ ಕಡಲತೀರ ಮದುವಣಗಿತ್ತಿಯಂತೆ ಶೃಂಗಾರ ಗೊಂಡಿದೆ. ಮೈಸೂರು ಯುವ ದಸರಾಕ್ಕೆ ಹಾಕುವ ವೇದಿಕೆ, ಲೈಟಿಂಗ್ ವ್ಯವಸ್ಥೆಯನ್ನು ಶನಿವಾರ ರಾತ್ರಿಯೇ ಸಜ್ಜುಗೊಳಿಸಲಾಗಿದೆ.
ಸರ್ಕಾರಿ ಕಚೇರಿ ಗೋಡೆಗಳು ಸಂಸ್ಕೃತಿ, ಪರಿಸರ ಜಾಗೃತಿ ಚಿತ್ರಗಳಿಂದ ಅಲಂಕೃತವಾಗಿವೆ. ಎಂಟು ವರ್ಷಗಳ ಸುದೀರ್ಘ ಬಿಡುವಿನ ನಂತರ ಹತ್ತು ಕೋಟಿ ವೆಚ್ಚದಲ್ಲಿ, ಏಳು ದಿನಗಳ ಕಾಲ ಸಾಂಸ್ಕೃತಿಕ ಉತ್ಸವ, ಬಾಲಿವುಡ್ , ಸ್ಯಾಂಡಲ್ ವುಡ್ ಗಾಯಕರಿಂದ ಕಡಲತೀರದಲ್ಲಿ ಸಂಗೀತದ ಅಲೆ ಏಳಲಿದೆ. ಕಾರವಾರ ಹಾಗೂ ಜಿಲ್ಲೆಯ ಪ್ರವಾಸೋದ್ಯಮ ಮೈಚಳಿ ಬಿಟ್ಟು ಕೊಡವಿ ನಿಂತಿದೆ. ಕಾರವಾರದ ಬೀದಿಗಳು ರೋಮಾಂಚನ ಗೊಂಡಿವೆ. ಜಿಲ್ಲೆಯ ಯುವಜನ ಹುಚ್ಚೆದ್ದು ಉತ್ಸವಕ್ಕೆ ಕಾಯುತ್ತಿದ್ದಾರೆ.
ಪಕ್ಕದ ಗೋವಾ ರಾಜ್ಯ ಹಾಗೂ ರಾಜ್ಯದ ಇತರೆ ಜಿಲ್ಲೆಗಳ ಜನ ಉತ್ಸವ ವೀಕ್ಷಿಸಲು ಆಗಮಿಸತೊಡಗಿದ್ದಾರೆ. ಡಿಸೆಂಬರ್ 22 ರಂದು ಅಪರಾಹ್ನ 4 ಗಂಟೆಗೆ ಸುಭಾಷಚಂದ್ರ ವೃತ್ತದಿಂದ ಮಯೂರ ವರ್ಮ ವೇದಿಕೆಯ ವರೆಗೆ 14 ಕಲಾ ತಂಡಗಳಿಂದ ಮೆರವಣಿಗೆ ಮೂಲಕ ಚಾಲನೆ ಸಿಗಲಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ರವಿವಾರ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ , ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಪ್ರವಾಸೋದ್ಯಮ ಸಚಿವ ಎಚ್ಕೆ ಪಾಟೀಲ್ ಉದ್ಘಾಟನೆ ಕಾರ್ಯಕ್ರಮಕ್ಕೆ ಬರಲಿದ್ದಾರೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಹಿರಿಯ ಶಾಸಕ ದೇಶಪಾಂಡೆ, ಶಾಸಕ ಸೈಲ್, ಶಾಸಕ ಭೀಮಣ್ಣ ಮೊದಲ ದಿನ ಗಾಯಕ ಶಂಕರ ಮಹಾದೇವನ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 