ಅಫ್ಘಾನಿಸ್ತಾನದಲ್ಲಿ 973 ಹೊಸ ಕೊರೋನ ಪ್ರಕರಣ ಪತ್ತೆ
ಕಾಬೂಲ್, ಜೂನ್ 13: ಅಫ್ಘಾನಿಸ್ತಾನದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸ ಕೊರೋನ ಸೋಂಕು ಪ್ರಕರಣಗಳಿಂದ 67 ಜನರು ಸಾವನ್ನಪ್ಪಿದ್ದು. 973 ಹೊಸ ಪ್ರಕರಣ ವರದಿಯಾಗಿದೆ.
ಇದು ದೇಶದಲ್ಲಿ ಮೃತರ ಒಟ್ಟು ಸಂಖ್ಯೆಯನ್ನು 3,527 ಕ್ಕೆ ಏರಿಕೆ ಮಾಡಿದೆ ಎಂದು ದೇಶದ ಸಾರ್ವಜನಿಕ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಈ ಅವಧಿಯಲ್ಲಿ 973 ಹೊಸ ಪ್ರಕರಣಗಳನ್ನು ಸಚಿವಾಲಯ ದಾಖಲಿಸಿದೆ. ದೇಶಾದ್ಯಂತ ಸೋಂಕಿತರ ಸಂಖ್ಯೆಯನ್ನು 89,861 ಕ್ಕೆ ಏರಿಕೆಯಾಗಿದೆ ಎಂದು ಸಚಿವಾಲಯದ ವರದಿ ಹೇಳಿದೆ.
ಅಂಕಿ-ಅಂಶಗಳ ಪ್ರಕಾರ, ಶುಕ್ರವಾರದ ನಂತರ 350 ಜನರು ಚೇತರಿಸಿಕೊಂಡು ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಕಳೆದ ಫೆಬ್ರವರಿಯಿಂದ ಅಫ್ಘಾನಿಸ್ತಾನದಲ್ಲಿ ದೇಶದಲ್ಲಿ 5 ಲಕ್ಷ 20,ಸಾವಿರಕ್ಕು ಹೆಚ್ಚು ಪರೀಕ್ಷೆ ನಡೆಸಲಾಗಿದೆ ಎಂದು ಅಧಿಕೃತ ಮಾಹಿತಿ ಹೇಳಿದೆ.