ಅಂತರರಾಷ್ಟ್ರೀಯ

ಚೀನಾದಲ್ಲಿ ಈ ವರ್ಷ 90 ಲಕ್ಷ ಹೊಸ ಪದವೀಧರರು!

ಚೀನಾದಲ್ಲಿ ಈ ವರ್ಷ 90 ಲಕ್ಷ ಹೊಸ ಪದವೀಧರರು!

ಬೀಜಿಂಗ್, ಮೇ 13 (ಕ್ಸಿನ್ಹುವಾ) ಚೀನಾದಲ್ಲಿ ಈ ವರ್ಷ ದೇಶದ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಿಂದ 90 ಲಕ್ಷದ 9 ಸಾವಿರ ಹೊಸ ಪದವೀಧರರು ಹೊರಹೊಮ್ಮುವ ನಿರೀಕ್ಷೆಯಿದ್ದು, ಇದು ಕಳೆದ ವರ್ಷಕ್ಕಿಂತ 3,50,000 ಅಧಿಕವಾಗಿದೆ ಎಂದು ಶಿಕ್ಷಣ ಸಚಿವಾಲಯ ಗುರುವಾರ ತಿಳಿಸಿದೆ.

ಪದವಿ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕಿಸಿಕೊಡಲು ಇಲ್ಲವೇ ನವೋದ್ಯಮಗಳನ್ನು ಸ್ಥಾಪಿಸಲು ನೆರವಾಗುವ ನಿಟ್ಟಿನಲ್ಲಿ ಕಳೆದ ಕೆಲ ತಿಂಗಳಿನಿಂದ  ಅಭಿಯಾನವನ್ನು ಆರಂಭಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. 

ಇಲ್ಲಿಯವರೆಗೆ ಉದ್ಯೋಗ ಪರಿಸ್ಥಿತಿ ಸುಗಮವಾಗಿ ಪ್ರಗತಿಯಲ್ಲಿದೆ ಎಂದು ಸಚಿವಾಲಯ ಹೇಳಿದೆ.

ಸುದ್ದಿ ಓದಿ