ಅಂತರರಾಷ್ಟ್ರೀಯ

ದಕ್ಷಿಣ ಕೊರಿಯಾದಲ್ಲಿ 715 ಹೊಸ ಕರೋನ ಪ್ರಕರಣಗಳನ್ನು ವರದಿ

ದಕ್ಷಿಣ ಕೊರಿಯಾದಲ್ಲಿ 715 ಹೊಸ ಕರೋನ ಪ್ರಕರಣಗಳನ್ನು ವರದಿ

ಸಿಯೋಲ್, ಮೇ 13: ದಕ್ಷಿಣ ಕೊರಿಯಾದದಲ್ಲಿ ಕಳದೆ 24 ಗಂಟೆಗಳ ಅವಧಿಯಲ್ಲಿ  715 ಹೊಸ ಕರೋನ ಸೋಂಕು   ಪ್ರಕರಣಗಳು ವರದಿಯಾಗಿದೆ. 

ಪರಿಣಾಮ ದೇಶದಲ್ಲಿ ಒಟ್ಟು ಸೋಂಕುಗಳ ಸಂಖ್ಯೆಯನ್ನು 1ಲಕ್ಷ 29,633 ಕ್ಕೆ ಹೆಚ್ಚಳವಾಗಿದೆ. ಸಿಯೋಲ್ ಮತ್ತು ಅದರ ಸುತ್ತಮುತ್ತಲಿನ ಜಿಯೊಂಗ್ಗಿ ಪ್ರಾಂತ್ಯದಲ್ಲಿ ಕ್ಲಸ್ಟರ್ ಸೋಂಕುಗಳು ಮತ್ತು ಆಮದು ಪ್ರಕರಣಗಳಿಂದಾಗಿ ಕಳೆದ ವರ್ಷದ  ನವೆಂಬರ್ 8 ರಿಂದ ದೈನಂದಿನ ಸೋಂಲಿತರ  ಸಂಖ್ಯೆ ಮೂರು ಪಟ್ಟು ಹೆಚ್ಚಳವಾಗಿದೆ.  

ಹೊಸ ಪ್ರಕರಣಗಳಲ್ಲಿ 227 ಸಿಯೋಲ್ ನಿವಾಸಿಗಳಾಗಿದ್ದರೆ,  222 ಜನರು ಜಿಯೊಂಗ್ಗಿ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದಾರೆ. 23  ಪ್ರಕರಣಗಳು  ವಿದೇಶದಿಂದ ಆಮದಾದ ಪ್ರಕರಣಗಳಾಗಿದೆ ಇನ್ನೂ 7  ಸಾವುಗಳು ದೃಡಪಟ್ಟಿದ್ದು ಸಾವಿನ  ಸಂಖ್ಯೆ 1,891ಕ್ಕೆ ಹೆಚ್ಚಳವಾಗಿದೆ  ಎಂದೂ   ವರದಿಯಾಗಿದೆ. 


ಸುದ್ದಿ ಓದಿ