ಮೆಕ್ಸಿಕೊದಲ್ಲಿ ವಿಮಾನ ಅಪಘಾತ: ಕನಿಷ್ಠ 6 ಸಾವು
ಮೆಕ್ಸಿಕೊ ನಗರ, ಏಪ್ರಿಲ್ 30: ಉತ್ತರ ರಾಜ್ಯದ ಮೆಕ್ಸಿಕೊದ ನ್ಯೂಯೆವೊ ಲಿಯಾನ್‌ನ ಡೆಲ್ ನಾರ್ಟೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಲಘು ವಿಮಾನ ಅಪಘಾತಕ್ಕೀಡಾಗಿ ಕನಿಷ್ಠ 6 ಜನರು ಮೃತಪಟ್ಟಿದ್ದಾರೆ.ಎಂದು ನಾಗರಿಕ ಅಧಿಕಾರಿಗಳು ತಿಳಿಸಿದ್ದಾರೆ.
ಆರು ಜನರಿದ್ದ ವಿಮಾನವು ಸಿಯೆನೆಗಾ ಡಿ ಫ್ಲೋರ್ಸ್‌ನ ಪುರಸಭೆಯ ಸಾರಿಗೆ ಕಂಪನಿಯ ಒಳಭಾಗಕ್ಕೆ ಅಪ್ಪಳಿಸಿ ದುರಂತಕ್ಕೆ ಒಳಗಾಗಿದೆ.
ಮೃತಪಟ್ಟವರಲ್ಲಿ ಮೂವರು ಪುರುಷರು ಮತ್ತು ಮೂವರು ಮಹಿಳೆಯರು ಸೇರಿದ್ದಾರೆ ಎಂದೂ ನಾಗರಿಕ ಸಂರಕ್ಷಣಾ ನಿರ್ದೇಶಕ ಮಿಗುಯೆಲ್ ಏಂಜಲ್ ಪೆರೇಲ್ಸ್ ಸುದ್ದಿಗಾರರರಿಗೆ ಹೇಳಿದರು.