ಮುಂದಿನ ವರ್ಷ 35 ಮಿಲಿಯನ್ ಬೂಸ್ಟರ್ ಫಿಜರ್ ಲಸಿಕೆ: ಕೆನಡಾ ಪ್ರಧಾನಿ
ವಾಷಿಂಗ್ಟನ್, ಏಪ್ರಿಲ್ 24: ಕೆನಡಾ ಮಂದಿನ ವರ್ಷ ಅಮೆರಿಕದಿಂದ 65 ಮಿಲಿಯನ್ ಬೂಸ್ಟರ್ ಕೊರೊನಾ ಫಿಜರ್ ಲಸಿಕೆ ಪಡೆಯಲಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಪ್ರಕಟಿಸಿದ್ದಾರೆ.
ಮುಂದಿನ ವರ್ಷಕ್ಕೆ 35 ಮಿಲಿಯನ್ ಬೂಸ್ಟರ್ ಡೋಸ್‌ಗಳಿಗಾಗಿ ಫಿಜರ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ಪರಿಣಾಮ ದೇಶದಲ್ಲಿ ಸೋಂಕು ನಿಯಂತ್ರಣದಲ್ಲಿಡಲು ಇದು ಸಹಕಾರಿಯಾಗಲಿದೆ ಎಂದು ಅವರು ಪ್ರಧಾನಿ ಟ್ರೂಡೊ ಟ್ವಿಟರ್‌ನಲ್ಲಿ ಶುಕ್ರವಾರ ಬರೆದುಕೊಂಡಿದ್ದಾರೆ. ಈ ಒಪ್ಪಂದವು 2024 ರಲ್ಲಿ 60 ಮಿಲಿಯನ್ ಡೋಸ್‌ಗಳ ಆಯ್ಕೆಯನ್ನು ಸಹ ಒಳಗೊಂಡಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕೆನಡಾ ಫಿಜರ್, ಮಾಡರ್ನಾ, ಅಸ್ಟ್ರಾಜೆನೆಕಾ ಮತ್ತು ಜಾನ್ಸನ್ ಮತ್ತು ಜಾನ್ಸನ್ ಲಸಿಕೆಯನ್ನು ಅಧಿಕೃತಗೊಳಿಸಿದ್ದು, ನಾಲ್ಕು ಲಸಿಕೆಗಳಲ್ಲಿ ಒಟ್ಟು 117 ಮಿಲಿಯನ್ ಡೋಸ್‌ಗಳನ್ನು ಖರೀದಿಸಿದೆ. ಈ ಮುಂಬರುವ ದಿನಗಳಲ್ಲಿ ಎಲ್ಲಾ ವಯಸ್ಕರಿಗೂ ಸಹ ಲಸಿಕೆ ನೀಡಲಾಗುವುದು ಎಂದು ಹೇಳಿದ್ದಾರೆ.
ಹೆಲ್ತ್ ಕೆನಡಾ 55 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕೆನಡಿಯನ್ನರಿಗೆ ಅಸ್ಟ್ರಾಜೆನೆಕಾ ಲಸಿಕೆಯೊಂದಿಗೆ ಚುಚ್ಚುಮದ್ದು ನೀಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ. ರಕ್ತ ಹೆಪ್ಪುಗಟ್ಟುವಿಕೆಯ ಬಗ್ಗೆ ಕೆನಡಾದ ರಾಷ್ಟ್ರೀಯ ರೋಗನಿರೋಧಕ ಸಮಿತಿಯ (ಎನ್‌ಎಸಿಐ) ಶಿಫಾರಸಿನ ನಂತರ,ಈ ಕ್ರಮ ಕೈಗೊಳ್ಳಲಾಗಿದೆ.