ಅಂತರರಾಷ್ಟ್ರೀಯ

ಪಾಕಿಸ್ತಾನದಲ್ಲಿ ಗುಂಡಿಕ್ಕಿ ಮೂವರ ಹತ್ಯೆ

ಪಾಕಿಸ್ತಾನದಲ್ಲಿ ಗುಂಡಿಕ್ಕಿ ಮೂವರ ಹತ್ಯೆ

ಇಸ್ಲಾಮಾಬಾದ್, ಫೆ 28:ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್‌ನ ಹೊರವಲಯದಲ್ಲಿ ಅಪರಿಚಿತ ಬಂದೂಕುಧಾರಿಗಳು ಮೂವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಅಲ್ಲಿನ ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಇಸ್ಲಾಮಾಬಾದ್‌ನ ಭರಾ ಕಹು ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಹತ್ಯೆಗೀಡಾದವರಲ್ಲಿ ಈ ಪ್ರದೇಶದ ಮಸೀದಿಯೊಂದರ ಮೌಲ್ವಿ ,ಆತನ 13 ವರ್ಷದ ಪುತ್ರ ಹಾಗೂ ಧಾರ್ಮಿಕ ವಿದ್ಯಾರ್ಥಿ ಸೇರಿದ್ದಾರೆ ಎಂದು ಪೊಲೀಸ್ ವಕ್ತಾರರು ಘಟನೆಯ ನಂತರ ತಿಳಿಸಿದ್ದಾರೆ.

ಬಂದೂಕುಧಾರಿಗಳು ಮಸೀದಿ ಬಳಿ ಮೂವರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

ದಾಳಿಯ ಹೊಣೆಯನ್ನು ಈವರೆಗೆ ಯಾರೊಬ್ಬರೂ ಹೊತ್ತಿಲ್ಲ. ಎಲ್ಲಾ ಅಂಶಗಳ ತನಿಖೆಗಾಗಿ ಎರಡು ಸಮಿತಿಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುದ್ದಿ ಓದಿ