ಅಂತರರಾಷ್ಟ್ರೀಯ

ಅಫ್ಘಾನ್ ಸೇನಾ ಕಾರ್ಯಾಚರಣೆ : 26 ತಾಲಿಬಾನ್ ಉಗ್ರರು ಹತ

ಅಫ್ಘಾನ್ ಸೇನಾ ಕಾರ್ಯಾಚರಣೆ : 26 ತಾಲಿಬಾನ್ ಉಗ್ರರು ಹತ

ಕಾಬೂಲ್, ಡಿಸೆಂಬರ್ 31: ಅಫ್ಘಾನಿಸ್ತಾನ ಮಿಲಿಟರಿ ಪಶ್ಚಿಮ ತರಾಹ್ ಪ್ರಾಂತ್ಯದಲ್ಲಿ  ಸೇನೆಯು ನಡೆಸಿದ ಕಾರ್ಯಾಚರಣೆಯಲ್ಲಿ 26 ತಾಲಿಬಾನ್ ಉಗ್ರರು ಹತರಾಗಿದ್ದು, 14 ಮಂದಿ ಗಾಯಗೊಂಡಿದ್ದಾರೆ.

ಈ ಕುರಿತು ಅಫ್ಘಾನ್ ರಕ್ಷಣಾ ಸಚಿವಾಲಯ ಗುರುವಾರ ಮಾಹಿತಿ ನೀಡಿದ್ದು, "ಕಳೆದ ರಾತ್ರಿ ಬಾಲಾ-ಬೊಲೊಕ್ ಜಿಲ್ಲೆ ಮತ್ತು ಫರಾಹ್ ಪ್ರಾಂತೀಯ ಕೇಂದ್ರದ ಹೊರವಲಯದಲ್ಲಿ 26 ತಾಲಿಬಾನಿಗಳು ಹತರಾಗಿದ್ದು, 14 ಮಂದಿ ಗಾಯಗೊಂಡಿದ್ದಾರೆ. ಅವರು ಎಎನ್ಎ ಸ್ಥಾನಗಳ ಮೇಲೆ ದಾಳಿ ಮಾಡಲು ಯೋಜಿಸುತ್ತಿದ್ದರು" ಎಂದು ಟ್ವೀಟ್ ಮಾಡಿದೆ.

ಶಸ್ತ್ರಾಸ್ತ್ರಗಳ ದೊಡ್ಡ ಸಂಗ್ರಹ, 3 ಸುರಂಗಗಳು ಮತ್ತು ತಾಲಿಬಾನ್ ಉಗ್ರರ 8 ಭದ್ರಕೋಟೆಗಳನ್ನು ಸಹ ನಾಶಪಡಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಸುದ್ದಿ ಓದಿ