ಮೂಡಲಗಿ

ಮಂಜುನಾಥ ವಿವಿಧೋದ್ದೇಶಗಳ ಸಂಘಕ್ಕೆ 22.51 ಲಕ್ಷ ಲಾಭ

ಮಂಜುನಾಥ ವಿವಿಧೋದ್ದೇಶಗಳ ಸಂಘಕ್ಕೆ 22.51 ಲಕ್ಷ ಲಾಭ

ಮೂಡಲಗಿ 11:  ಸಂಘವು ಎರಡು ಶಾಖೆಗಳನ್ನು ಹೊಂದಿದ್ದು ಶಾಖೆಗಳು ಪ್ರಗತಿಯಲ್ಲಿವೇ ಮತ್ತು ಪ್ರಧಾನ ಕಛೇರಿಯ ವ್ಯವಹಾರವು ಶೇರುದಾರರ ಮತ್ತು ಠೇವುದಾರರ ಸಹಕಾರದಿಂದ ವರ್ಷದಿಂದ ವರ್ಷಕ್ಕೆ ಪ್ರಗತಿ ಕಾಣುತ್ತಿದೆ ಎಂದು ಮಂಜುನಾಥ ವಿವಿಧ ಉದ್ದೇಶಗಳ ಸಹಕಾರಿ ಸಂಘದ ಅಧ್ಯಕ್ಷ ಸಂಗಪ್ಪ ನಿಡಗುಂದಿ ಹೇಳಿದರು.  

ಅವರು ಬುಧವಾರ ಮಂಜುನಾಥ ವಿವಿಧ ಉದ್ದೇಶಗಳ ಸಹಕಾರಿ ಸಂಘದ 13ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಶೇರುದಾರರ ಮತ್ತು ಠೇವುದಾರರ ಸಹಕಾರದಿಂದ ಸಂಘವು 22.51  ಲಕ್ಷ ಲಾಭದೊಂದಿಗೆ ಪ್ರಗತಿಯತ್ತ ಸಾಗುತ್ತಿದೆ, ಮಾರ್ಚ ಅಂತ್ಯಕ್ಕೆ ಸಂಘವು 22.51 ಲಕ್ಷ ಲಾಭ ಗಳಿಸಿದೆ ಎಂದರು 

ಸಂಘದ ಉಪಾಧ್ಯಕ್ಷ ರುದ್ರ​‍್ಪ ಬಳಿಗಾರ ಮಾತನಾಡಿ, ಸಂಘವು 12 ವರ್ಷಗಳನ್ನು ಪೂರೈಸಿ 13ನೇ ವರ್ಷಕ್ಕೆ ಪಾದಾರೆ​‍್ನ ಮಾಡುತ್ತಿರುವುದು ಸಂತಸದ ವಿಷಯ. ಸಂಘದ ಬೆಳವಣಿಗೆಗೆ ಸಾಲಗಾರರೆ ಮೂಲ. ಬಂಡವಾಳ ಪಡೆದ ಸಾಲವನ್ನು ಸಕಾಲಕ್ಕೆ ತುಂಬುವದರಿಂದ ಬೇರೆಯವರಿಗೆ ಸಾಲವು ಸಿಗುತ್ತದೆ ಸಂಘವು ಏಳ್ಗೆ ಕಾಣುತ್ತದೆ ಎಂದರು.  

ಆಡಳಿತ ಮಂಡಳಿಯ ಪರವಾಗಿ ಅಧ್ಯಕ್ಷ ಸಂಗಪ್ಪ ನಿಡಗುಂದಿ ಉಪಾಧ್ಯಕ್ಷ ರುದ್ರ​‍್ಪ ಬಳಿಗಾರ ಚಾರ್ಟಡ ಅಕೌಂಟನ ಪರೀಕ್ಷೆಯನ್ನು ಪಾಸು ಮಾಡಿದ ಧರ್ಮರಾಜ ಪೂಳ, ಸಂತೋಷ ಹೊಸಮನಿ ಅವರನ್ನು ಸನ್ಮಾನಿಸಿದರು,  

ನಿರ್ದೇಶಕರಾದ ಶಿವಬಸು ಕುಡಚಿ, ಶಿವಬಸು ಸುಣದೋಳಿ, ಶಿವಬೋಧ ಉದಗಟ್ಟಿ, ಪಾಂಡುರಂಗ ಮಹೇಂದ್ರಕರ, ಲಕ್ಷ್ಮಿ ಶಿವಾಪೂರ, ಶೈಲಜಾ ನಾರಯಣಕರ, ರಶ್ಮಿ ಸಸಾಲಟ್ಟಿ, ಹನಮಂತ ಸನದಿ, ದೇವಪ್ಪ ಕುರಿ ಹಾಗೂ ಶೇರುದಾರರು ಹಾಗೂ ಸಂಘದ ಹಿತೈಸಿಗಳು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಬಸವರಾಜ ಕುದರಿ ಸ್ವಾಗತಿಸಿ ವಂದಿಸಿದರು. 


ಸುದ್ದಿ ಓದಿ