ಮೂಡಲಗಿ

ಲೋಕ ಅದಲಾತ್‍ದಲ್ಲಿ 213 ಪ್ರಕರಣಗಳು ಇತ್ಯರ್ಥ: ನ್ಯಾ. ಸುರೇಶ

ಲೋಕ ಅದಲಾತ್‍ದಲ್ಲಿ 213 ಪ್ರಕರಣಗಳು ಇತ್ಯರ್ಥ: ನ್ಯಾ. ಸುರೇಶ
ಮೂಡಲಗಿ ದಿವಾಣಿ ಹಾಗೂ ಜೆ.ಎಮ್.ಎಪ್.ಸಿ. ನ್ಯಾಯಾಲಯದಲ್ಲಿ ನಡೆದ ಲೋಕ ಅದಲಾತ್‍ದಲ್ಲಿ ನ್ಯಾಯಾಧೀಶ ಸುರೇಶ ಎಸ್.ಎನ್. 213 ಪ

ಮೂಡಲಗಿ 28: ತಾಲೂಕಿನ ದಿವಾಣಿ ಹಾಗೂ ಜೆಎಮ್‍ಎಫ್‍ಸಿ ನ್ಯಾಯಾಲಯದಲ್ಲಿ ನಡೆದ ಲೋಕ ಅದಲಾತ್‍ದಲ್ಲಿ ಸುಮಾರು 213 ಪ್ರಕರಣಗಳು ಇತ್ಯರ್ಥಗೊಂಡು ಕಕ್ಷಿದಾರರು ನಿಟ್ಟುಸಿರು ಬಿಡುವಂತಾಗಿದೆ ಎಂದು ನ್ಯಾಯಾಧೀಶ ಸುರೇಶ ಎಸ್.ಎನ್. ಅವರು ಹೇಳಿದರು.

ಸ್ಥಳೀಯ ನ್ಯಾಯಾಲಯದ ಆವರಣದಲ್ಲಿ ಶನಿವಾರ ನಡೆದ ಲೋಕ ಅದಾಲತ್‍ದಲ್ಲಿ ಮಾತನಾಡಿದ ಅವರು 21 ಸಿವಿಲ್ ಪ್ರಕರಣಗಳು ಮತ್ತು 192 ಕ್ರಿಮಿನಲ್ ಪ್ರಕರಣಗಳು ಇತ್ಯರ್ಥವಾಗಿದ್ದು ರಾಜಿ ಸೂತ್ರದ ಮೂಲಕ ಕೆಲವು ಚೆಕ್‍ಬೌನ್ಸ್ ಪ್ರಕರಣಗಳು ಇತ್ಯರ್ಥವಾಗಿದ್ದು ಹಾಗೂ ದಂಡವಾಗಿ 9,35,572/- ರೂ. ರಷ್ಟು ಹಣ ವಸೂಲಿ ಮಾಡಿದ್ದಾಗಿ ಹೇಳಿದರು ಇದರಿಂದ ಚೆಕ್ ನೀಡಿದವರು ಶಿಕ್ಷೆಯಿಂದ ಪಾರಾಗಿದ್ದು ಚೆಕ್ ಹಣ ಪಡೆದವರು ನೆಮ್ಮದಿ ಕಂಡುಕೊಂಡಿದ್ದಾರೆ. ರಾಜಿಯಾಗುವ ಪ್ರಕರಣಗಳನ್ನು ಲೋಕ ಅದಾಲತ್‍ದಲ್ಲಿ ಮುಗಿಸುವುದರಿಂದ  ಕೋರ್ಟಗೆ ಅಲೆದಾಡುವುದು ತಪ್ಪುತ್ತದೆ ಎಂದರು

ಲೋಕ ಅದಾಲತ್‍ದಲ್ಲಿ ಸಂಧಾನಕಾರರಾಗಿ ನ್ಯಾಯವಾದಿ ಲಕ್ಷ್ಮಣ ವಾಯ್. ಅಡಿಹುಡಿ ಕಾರ್ಯ ನಿರ್ವಹಿಸಿದರು. ಈ ಸಂದರ್ಭದಲ್ಲಿ ವಕೀಲರು ಮತ್ತು ಪಕ್ಷಗಾರರು ಲೋಕ ಅದಲಾತ್ ಯಶಸ್ವಿಯಾಗಲು ಸಹಕಾರ ನೀಡಿದರು. 

ಸುದ್ದಿ ಓದಿ