ಹುಕ್ಕೇರಿ

20ನೇ ವಾರ್ಷಿಕೋತ್ಸವ ಮತ್ತು ಬೋನಸ್ ವಿತರಣಾ ಸಮಾರಂಭ.

20ನೇ ವಾರ್ಷಿಕೋತ್ಸವ ಮತ್ತು ಬೋನಸ್ ವಿತರಣಾ ಸಮಾರಂಭ.

 20ನೇ ವಾರ್ಷಿಕೋತ್ಸವ ಮತ್ತು ಬೋನಸ್ ವಿತರಣಾ ಸಮಾರಂಭ.  

ಹುಕ್ಕೇರಿ24 ; ಬಡಕುಂದ್ರಿ ಗ್ರಾಮದ ಯುವಚೇತನ ಹಾಲು ಉತ್ಪಾದಕರ ವಿವಿಧೋದ್ದೇಶಗಳ ಸಂಘದ 20ನೇ ವಾರ್ಷಿಕೋತ್ಸವ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾಲು ಉತ್ಪಾದಕ ರೈತ ಸದಸ್ಯರಿಗೆ ಬೋನಸ್ ಮತ್ತು ಬಹುಮಾನ ವಿತರಣಾ ಸಮಾರಂಭ ರವಿವಾರ ಅ.27ರಂದು ಸಂಜೆ 6.30ಕ್ಕೆ ಶ್ರೀ ಮಾರುತಿ ಮಂದಿರದ ಸಭಾಂಗಣದಲ್ಲಿ ಜರುಗಲಿದೆ.  

ಗಡಹಿಂಗ್ಲಜ ಜಡೆಯಸಿದ್ದೇಶ್ವರ ಬಿಲ್ವಾಶ್ರಮದ ಮಹಾಂತ ಸಿದ್ಧೇಶ್ವರ ಮಹಾಸ್ವಾಮಿಜೀ ಸಾನಿಧ್ಯ ವಹಿಸುವರು. ಸಂಘದ ಪ್ರತಿನಿಧಿ ಮಾರುತಿ ಮಲ್ಲಪ್ಪಾ ಪೂಜೇರಿ ಅಧ್ಯಕ್ಷತೆ ವಹಿಸಲಿದ್ದಾರೆ. ಕ್ಷೀರಮಿತ್ರ ಪ್ರಶಸ್ತಿ ಪುರಸ್ಕೃತ ರೈತಪ್ರತಿನಿಧಿ ಶಂಕರ ಎಸ್‌.ಶಿರಗಾಂವಿ ಹಾಗೂ ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕರಾದ ಎಸ್‌.ಎಸ್‌.ವಾಸೇದಾರ, ಎ.ಎಮ್‌.ಪಾಟೀಲ, ಎಮ್‌.ಎ.ಮಾನಗಾಂವಿ, ನಿವೃತ್ತ ಪಿಎಸ್‌ಐ ಚಿದಾನಂದ ಮಾನಗಾಂವಿ, ನಿವೃತ್ತ ಕೃಷಿ ಅಧಿಕಾರಿ ಜಿ.ಬಿ.ಕಮತಿ, ಪಿಕೆಪಿಎಸ್ ಅಧ್ಯಕ್ಷ ಸಿದ್ದು ಮಾನಗಾಂವಿ, ಪಿಕೆಪಿಎಸ್ ಮಾಜಿ ಅಧ್ಯಕ್ಷ ವಿ.ಎಸ್‌.ನಿಪ್ಪಾಣಿ, ಬಿ.ಎಸ್‌.ವ್ಹಿ ಸಂಘದ ಮಾಜಿ ಅಧ್ಯಕ್ಷ ಕೆಂಪಣ್ಣಾ ಚೌಗಲಾ, ಎಚ್‌.ಎಲ್‌.ಪೂಜೇರಿ, ಪಿ.ಬಿ.ಮಗದುಮ್ಮ, ಪಿ.ಎ.ವಾಸೇದಾರ ಆಗಮಿಸಲಿದ್ದಾರೆ ಎಂದು ಕಾರ್ಯದರ್ಶಿ ಡಿ.ಸಿ.ಸುಣಕುಪ್ಪಿ ತಿಳಿಸಿದ್ದಾರೆ. 


ಸುದ್ದಿ ಓದಿ