ಸಿರಿಯಾ : ಹಸಾಕಾ ಸ್ಫೋಟದಲ್ಲಿ 2 ಸಾವು
ಡಮಾಸ್ ಕಸ್, ಆಗುಸ್ಟ್ 27 (ಕ್ಸಿನ್ಹುವಾ): ಸಿರಿಯಾದ ಈಶಾನ್ಯ ಪ್ರಾಂತ್ಯದ
ಹಸಾಕಾದಲ್ಲಿ ಬಂಡುಕೋರರ ಹಿಡಿತದಲ್ಲಿರುವ ನಗರದಲ್ಲಿ ಗುರುವಾರ ಮೋಟಾರ್ ಸೈಕಲ್ ಸ್ಫೋಟಗೊಂಡು ಇಬ್ಬರು ಸಾವನ್ನಪ್ಪಿದ್ದಾರೆ
ಮತ್ತು 10 ಮಂದಿ ಗಾಯಗೊಂಡಿದ್ದಾರೆ.
ಹಸಾಕಾ ಗ್ರಾಮಾಂತರದಲ್ಲಿರುವ ಟರ್ಕಿ ಬೆಂಬಲಿತ ಬಂಡುಕೋರರು ನಿಯಂತ್ರಿಸುತ್ತಿರುವ ರಾಸ್ ಅಲ್-ಐನ್ ನಗರದ ಅಂಗಡಿಯೊಂದರ ಬಳಿ ಈ ಸ್ಫೋಟ ಸಂಭವಿಸಿದೆ ಎಂದು ಸಿರಿಯನ್ ಮಾನವ ಹಕ್ಕುಗಳ ವೀಕ್ಷಣಾಲಯ ತಿಳಿಸಿದೆ.
ಗಾಯಗೊಂಡವರಲ್ಲಿ ಕೆಲವರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಬ್ರಿಟನ್ ಮೂಲದ ವಾಚ್‌ಡಾಗ್ ಹೇಳಿದೆ.
ಉತ್ತರ ಸಿರಿಯಾದಲ್ಲಿ ಟರ್ಕಿಶ್ ಪಡೆಗಳು ಮತ್ತು ಟರ್ಕಿ ಬೆಂಬಲಿತ ಬಂಡುಕೋರರು ನಿಯಂತ್ರಿಸುವ ಪ್ರದೇಶಗಳಲ್ಲಿ ಇತ್ತೀಚೆಗೆ ಕೆಲ ಸ್ಫೋಟಗಳು ಸಂಭವಿಸಿವೆ.
ಆಗಸ್ಟ್ 22 ರಂದು, ಉತ್ತರ ಸಿರಿಯಾದ ರಕ್ಕಾ ಪ್ರಾಂತ್ಯದ ಉತ್ತರದ ಗ್ರಾಮಾಂತರ ಪ್ರದೇಶದಲ್ಲಿ ಟರ್ಕಿ ನಿಯಂತ್ರಿತ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದ್ದು, ಅನೇಕರು ಗಾಯಗೊಂಡಿದ್ದಾರೆ ಎಂದು ವೀಕ್ಷಣಾಲಯ ತಿಳಿಸಿದೆ.
ಅಕ್ಟೋಬರ್ 2019 ರಲ್ಲಿ ನಡೆದ ಕಾರ್ಯಾಚರಣೆಯ ನಂತರ ಟರ್ಕಿ ಉತ್ತರ ಮತ್ತು ಈಶಾನ್ಯ ಸಿರಿಯಾದ ಕುರ್ದಿಷ್ ನೇತೃತ್ವದ ಮಿಲಿಟಿಯಾದ ಹಲವಾರು ಪ್ರದೇಶಗಳನ್ನು ವಶಪಡಿಸಿಕೊಂಡಿದೆ.