ಬ್ರೆಜಿಲ್ ನಲ್ಲಿ 24 ಗಂಟೆಯಲ್ಲಿ 2,500 ಹೆಚ್ಚು ಕರೋನ ಸಾವು
ರಿಯೊ ಡಿ ಜನೈರೊ, ಮೇ 13: ಬ್ರೆಜಿಲ್ ನಲ್ಲಿ ಕಳೆದ 24 ಗಂಟೆಗಳಲ್ಲಿ ಕರೋನ ಸೋಂಕಿಗೆ ಹೊಸದಾಗಿ 2,494ಕ್ಕು ಹೆಚ್ಚು ಸಾವಿನ ಪ್ರಕರಣ ವರದಿಯಾಗಿದೆ .
ಪರಿಣಾಮ ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 4 ಲಕ್ಷ 28ಸಾವಿರ ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ. ಪರೀಕ್ಷೆಗಳ ಮೂಲಕ 76,692 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆಯನ್ನು 15ಲಕ್ಷಕ್ಕೂ ಹೆಚ್ಚಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಅಮೆರಿಕ ನಂತರ ಬ್ರೆಜಿಲ್ ನಂತರ ವಿಶ್ವದ ಎರಡನೇ ಅತಿ ಹೆಚ್ಚು ಕರೋನ ಸೋಂಕು ಹೊಂದಿದ ದೇಶವಾಗಿದೆ ನಂತರ ಭಾರತದ ಮೂರನೇ ಅತಿದೊಡ್ಡ ಸೋಂಕು ಪ್ರಕರಣ ಹೊಂದಿದ ದೇಶವಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಸೋಮವಾರದ ವೇಳೆಗೆ, ಬ್ರೆಜಿಲ್ 54.8 ಮಿಲಿಯನ್ ಜನರಿಗೆ ಕೋವಿಡ್ ವಿರುದ್ಧದ ಲಸಿಕೆ ನೀಡಲಾಗಿದೆ.