ಮೂಡಲಗಿ

ಲೋಕ ಅದಾಲತ್‌ದಲ್ಲಿ 1954 ಪ್ರಕರಣಗಳನ್ನು ಇತ್ಯರ್ಥ

ಲೋಕ ಅದಾಲತ್‌ದಲ್ಲಿ 1954 ಪ್ರಕರಣಗಳನ್ನು ಇತ್ಯರ್ಥ

ಮೂಡಲಗಿ 13: ನ್ಯಾಯಾಲಯದಲಿನ್ಲ ಪ್ರಕರಣಗಳನ್ನು ಸೌಹಾರ್ದಯುತ ರೀತಿ ಇತ್ಯರ್ಥಪಡಿಸುವ ಲೋಕ್ ಅದಾಲತ್ ಕಾರ್ಯಕ್ರಮ ದಾವೆದಾರರಿಗೆ ಬಹಳ  ಅನೂಕುಲವಾಗಲ್ಲಿದೆ ಎಂದು  ಪಟ್ಟಣದ ದಿವಾಣಿ ಹಾಗೂ ಜೆ.ಎಮ್‌.ಎಫ್‌.ಸಿ ನ್ಯಾಯಾಧೀಶೆ ಜ್ಯೋತಿ ಪಾಟೀಲ ಅವರು ಹೇಳಿದರು.   

ಅವರು ಪಟ್ಟಣದ ದಿವಾಣಿ  ಮತ್ತು ಜೆಎಮ್‌ಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಶನಿವಾರದಂದು ಜರುಗಿದ ಲೋಕ್ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿ, ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರತಿ ಮೂರು ತಿಂಗಳಗೊಮ್ಮೆ ನಡೆಯುವ ಲೋಕ್ ಅದಾಲತ್ತಿನಲ್ಲಿ ಪ್ರಕರಣಗಳನ್ನು ಇತ್ಯರ್ಥ ಪಡಿಸುವದರಿಂದ ಸಮಯ ಹಾಗೂ ಹಣವನ್ನು ಉಳಿಸಿ ಕೊಳ್ಳಬಹುದು, ವಿವಿಧ ಪ್ರಕರಣಗಳಲ್ಲಿ ನ್ಯಾಯಾಲಯ ಮೆಟ್ಟಿಲು ಏರಿರುವರು ರಾಜಿ ಸಂದಾನ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಂಡರೆ ಇಬ್ಬರಿಗೂ ಗೆಲ್ಲುವು ಸಿಗುವುದರೊಂದಿಗೆ ಸಹಬಾಳ್ವೇಯಿಂದ ಜೀವನ ನಡೆಸಲ್ಲು ಸಾಧ್ಯ ಎಂದರು 

ಇಂದಿನ ಲೋಕ ಅದಾಲತದಲ್ಲಿ 43 ಸಿವಿಲ್ ಪ್ರಕರಣಗಳು, 1620  ಕ್ರೀಮಿನಲ್ ಪ್ರಕರಣ, 23ಬ್ಯಾಂಕ್ ಪ್ರಕರಣ, ಓರ್ವ ಮಹಿಳೆಗೆ ಉಪಜೀವನಾಂಶ, ಎರಡು ಜೋಡಿ ಗಂಡ-ಹೆಂಡತಿ ಹೊಂದಾಣಿಕೆ ಹಾಗೂ 265 ಜನನ-ಮರಣ  ಪ್ರಕರಣಗಳನ್ನು ನ್ಯಾಯಾಧೀಶರಾದ ಜ್ಯೋತಿ ಪಾಟೀಲ ಅವರು ಇತ್ಯರ್ಥಗೊಳಿಸಿದರು.  

ಈ ಸಂದರ್ಭದಲ್ಲಿ ಸರಕಾರಿ ನ್ಯಾಯವಾದಿ ಶುಭ, ಮೂಡಲಗಿ ನ್ಯಾಯವಾದಿಗಳ ಸಂಘದ ಆರ್‌.ಆರ್‌.ಬಾಗೋಜಿ, ಪ್ರಧಾನ ಕಾರ್ಯದರ್ಶಿ ಅನೀಲ ಕೌಜಲಗಿ ಮತ್ತು ಪದಾಧಿಕಾರಿಗಳು, ವಕೀಲರು,  ಹಾಗೂ ನ್ಯಾಯಾಲಯ ಸಿಬ್ಬಂದಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ