ಗದಗದಲ್ಲಿ ಮತ್ತೆ 15 ಕೋವಿಡ್ ಪಾಸಿಟಿವ್ ಪ್ರಕರಣ ದೃಢ

ಗದಗದಲ್ಲಿ ಮತ್ತೆ 15 ಕೋವಿಡ್ ಪಾಸಿಟಿವ್ ಪ್ರಕರಣ ದೃಢ

ಗದಗ, ಮೇ 23, ಗದಗ ಜಿಲ್ಲೆಗೆ ಗುಜರಾತದಿಂದ ಹಿಂದಿರುಗಿದ 15 ಮಂದಿಯಲ್ಲಿ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.
25 ವರ್ಷದ ಪುರುಷ  ಪಿ-1744, 17 ವರ್ಷದ ಪುರುಷ ಪಿ-1745,  ಮಹಾರಾಷ್ಟ್ರದಿಂದ ಹಿಂದುರಿಗಿದ 7 ವರ್ಷದ  ಹೆಣ್ಣು ಮಗು ಪಿ-1746, 20 ವರ್ಷದ ಪುರುಷ ಪಿ-1747, 50ವರ್ಷದ ಮಹಿಳೆ ಪಿ-1748,   ರಾಜಸ್ಥಾನ ದಿಂದ ಹಿಂದಿರುಗಿದ 17 ವರ್ಷದ ಹೆಣ್ಣುಮಗಳು ಪಿ-1763, ಪಿ-913 ಪ್ರಕರಣ  ಸಂಪರ್ಕಿತ 15 ವರ್ಷದ ಗಂಡುಮಗ ಪಿ-1794, 17 ವರ್ಷದ ಗಂಡುಮಗ ಪಿ-1795, 50 ವರ್ಷದ  ಮಹಿಳೆ ಪಿ-1932, 20 ವರ್ಷದ ಹೆಣ್ಣು ಮಗಳು ಪಿ-1933, 22 ವರ್ಷದ ಹೆಣ್ಣು ಮಗಳು  ಪಿ-1934, 18 ವರ್ಷದ ಗಂಡುಮಗ ಪಿ-1935, 18 ವರ್ಷದ ಹೆಣ್ಣು ಮಗಳು ಪಿ-1936, 8 ವರ್ಷದ  ಹೆಣ್ಣು ಮಗಳು ಪಿ-1937,  21 ವರ್ಷದ ಗಂಡುಮಗ ಪಿ-1938  ಒಟ್ಟು 15 ಕೋವಿಡ್-19 ಸೋಂಕು  ಧೃಡಪಟ್ಟಿದ್ದು ಅವರೆಲ್ಲರಿಗೂ ನಿಗದಿತ ಕೊವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ  ನೀಡಲಾಗುತ್ತಿದೆ ಎಂದು ಎಂ.ಜಿ.ಹಿರೇಮಠ ತಿಳಿಸಿದ್ದಾರೆ.
ಸೋಂಕಿತರ  ಪ್ರಯಾಣದ ವಿವರ:- ದಿ. 18ರಂದು ಗುಜರಾತದ ಅಹಮದಾಬಾದದಿಂದ ಎರಡು ವಾಹನಗಳ ಮೂಲಕ ಒಟ್ಟು  17ಜನ ಜಿಲ್ಲೆಗೆ ಆಗಮಿಸಿದ್ದು ಇದರಲ್ಲಿ ಪಿ-1744 ಹಾಗೂ ಪಿ-1745 ಇವರು ಎರಡು  ಕೋವಿಡ್-19 ಸೋಂಕು ಧೃಡಪಟ್ಟಿದೆ. ಪ್ರಾಥಮಿಕ ಸಂಪರ್ಕಿತ ಉಳಿದ 15 ಜನರನ್ನು  ನಿಗಾದಲ್ಲಿರಿಸಲಾಗಿದೆ.  ಮಹಾರಾಷ್ಟ್ರದಿಂದ ನಿಪ್ಪಾಣಿ ವರೆಗೆ ಬಾಡಿಗೆ ವಾಹನದ ಮೂಲಕ  ಬಂದು ನಿಪ್ಪಾಣಿಯಿಂದ ಗದಗ ವರೆಗೆ ಲಾರಿ ಮೂಲಕ ಜಿಲ್ಲೆಗೆ ಆಗಮಿಸಿದ್ದ 4 ಜನರಲ್ಲಿ  ಪಿ-1746, ಪಿ-1747, ಪಿ-1748 ಮೂರ ಜನರಿಗೆ ಸೋಂಕು ದೃಡಪಟ್ಟಿದ್ದು ಪ್ರಾಥಮಿಕ  ಸಂಪರ್ಕಿತ ಒಬ್ಬರನ್ನು ನಿಗಾದಲ್ಲಿರಿಸಲಾಗಿದೆ.
ಮೇ 18 ರಂದು ರಾಜಸ್ಥಾನದ ಅಜ್ಮೀರ  ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡಿದ ಲಕ್ಷ್ಮೇಶ್ವರ ತಾಲೂಕಿನ 4 ಕುಟುಂಬದ ಒಟ್ಟು 17  ಜನರಲ್ಲಿ ಪಿ-1763ಗೆ ಸೋಂಕು ಧೃಡಪಟ್ಟಿದ್ದು ಪ್ರಾಥಮಿಕ ಸಂಪರ್ಕಿತ 16, ದ್ವೀತಿಯ  ಸಂಪರ್ಕಿತ 5 ಜನರನ್ನು ನಿಗಾದಲ್ಲಿರಿಸಲಾಗಿದೆ. ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ  ಗಂಜಿ ಬಸವೇಶ್ವರ ವೃತ್ತದ ನಿರ್ಬಂಧಿತ ಪ್ರದೇಶದಲ್ಲಿ ಸೋಂಕು ಧೃಡಪಟ್ಟ ಪಿ-1933  ಸಂಪರ್ಕಿತ ಪಿ-1794, ಪಿ-1795, ಪಿ-1932, ಪಿ-1933, ಪಿ-1934, ಪಿ-1935, ಪಿ-1936,  ಪಿ-1937, ಪಿ-1938 ಗೆ ಸೋಂಕು ಧೃಡಪಟ್ಟಿರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.